
ತುಮಕೂರು: ಸಿದ್ಧಗಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಇಂದು ಬೆಳಗ್ಗೆಯಿಂದ ವಿವಿಧ ಪೂಜಾ ವಿಧಿವಿಧಾನಗಳು ಆರಂಭಗೊಂಡಿವೆ.
ಶಿವಕುಮಾರ ಸ್ವಾಮೀಜಿ ಗದ್ದುಗೆ ಪೂಜೆಗೆ ತೆರಳಿದ ಮಠದ ಸಿದ್ಧಲಿಂಗ ಸ್ವಾಮೀಜಿ ತಮ್ಮ ವಿವಿಧ ಮಠಾಧೀಶರೊಂದಿಗೆ ಗದ್ದುಗೆ ಬಳಿ ತೆರಳಿ ಪೂಜೆ ನೆರವೇರಿಸುತ್ತಿದ್ದಾರೆ. ಮಠದ ಸಿದ್ದಗಂಗೆಯ ಬೆಟ್ಟದ ಸಿದ್ಧಲಿಂಗೇಶ್ವರ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಶಿವಕುಮಾರ ಸ್ವಾಮೀಗಳ ಗದ್ದುಗೆಗೆ ಅಭಿಷೇಕ ನೆರವೇರುತ್ತಿದೆ.
ಇನ್ನೊಂದೆಡೆ ಮಠಕ್ಕೆ ಆಗಮಿಸುವ ಭಕ್ತರು ಸಿದ್ಧಗಂಗಾ ಶ್ರೀಗಳು ಕೂರುತ್ತಿದ್ದ ಪೀಠದ ದರ್ಶನ ಪಡೆಯುತ್ತಿದ್ದಾರೆ. ರಾತ್ರಿ ಬಂದಿರುವ ಭಕ್ತರು ಮಠದ ಆವರಣದಲ್ಲಿ ವಿಶ್ರಾಂತಿ ಪಡೆದಿದ್ದಾರೆ.
ಭಕ್ತರಿಗೆ ಶ್ರೀಗಳ ಶಿವೈಕ್ಯ ಗದ್ದುಗೆ ಪ್ರವೇಶಕ್ಕೆ ಜನರಿಗೆ ಅವಕಾಶ ನೀಡಲಾಗುತ್ತಿಲ್ಲ. ಸದ್ಯ ಮಠದ ಸುತ್ತ ಪೊಲೀಸ್ ಭದ್ರತೆ ಇದೆ.