ತಂಡದ ಪರ ವೇಗವಾಗಿ 100ನೇ ವಿಕೆಟ್ ಪಡೆದ ಮೊಹ್ಮದ್ ಶಮಿ

ಟೀಂ ಇಂಡಿಯಾದ ಸ್ಪೀಡ್ ಸ್ಟಾರ್ ಮೊಹ್ಮದ್ ಶಮಿ ಶಾಂಧಾರ್ ಪರ್ಫಾಮನ್ಸ್ ಕೊಟ್ಟಿದ್ದಾರೆ. ನಿನ್ನೆ ನೇಪಿಯರ್ ಅಂಗಳದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬೆಂಗಾಲ್ ಸ್ಪೀಡ್ ಸ್ಟಾರ್ ಕಮಾಲ್ ಮಾಡಿ ವಿನೂತನ ದಾಖಲೆ ಬರೆದ್ರು.

ಮೊನ್ನೆಯಷ್ಟೆ ಕಾಂಗರೂ ನಾಡಲ್ಲಿ ಮೂರು ಪಂದ್ಯಗಳಿಂದ 5 ವಿಕೆಟ್ ಪಡೆದು ಮಿಂಚಿದ್ದ ಶಮಿ ನಾಲ್ಕನೆ ಯಶಸ್ವಿ ಬೌಲರ್ ಎಂಬ ಗೌರವಕ್ಕೂ ಪಾತ್ರರಾಗಿದ್ರು. ಇದೀಗ ಕಿವೀಸ್ ನಾಡಲ್ಲೂ ಮಿಂಚು ಹರಿಸಿದ್ದಾರೆ.

ಮೊದಲ ಓವರ್ನಲ್ಲೆ ಕಮಾಲ್ ಮಾಡಿದ ಸ್ಪೀಡ್ ಸ್ಟಾರ್
ಸಾಲಿಡ್ ಫಾರ್ಮ್ನಲ್ಲಿದ್ದ ಮೊಹ್ಮದ್ ಶಮಿ ತಮ್ಮ ಮೊದಲ ಓವರ್ನಲ್ಲೆ ಕಿವಿಸ್ ಕಿವಿ ಹಿಂಡಿದ್ರು. ಎರಡನೇ ಓವರ್ನಲ್ಲಿ ದಾಳಿಗಿಳಿದ ಶಮಿ ಶೈನ್ ಆದ್ರು. ಐದನೇ ಎಸೆತದಲ್ಲಿ ಓಪನರ್ ಮಾರ್ಟಿನ್ ಗಪ್ಟಿಲ್ ಅವರನ್ನ ಬೌಲ್ಡ್ ಮಾಡಿ ಮೊದಲ ಶಾಕ್ ಕೊಟ್ರು.

ನಂತರ ನಾಲ್ಕನೆ ಓವರ್ನಲ್ಲಿ ಕಣಕ್ಕಿಳಿದ ಶಮಿ ಸ್ಫೋಟಕ ಬ್ಯಾಟ್ಸ್ ಮನ್ ಕಾಲಿನ್ ಮನ್ರೊ ಅವರನ್ನೂ ಬೌಲ್ಡ್ ಮಾಡಿದ್ರು. ಇದರೊಂದಿಗೆ ಕಿವೀಸ್ಗೆ ಎರಡನೇ ಶಾಕ್ ಕೊಟ್ರು.

ಇದಾದ ನಂತರ 30ನೇ ಓವರ್ನಲ್ಲಿ ದಾಳಿಗಿಳಿದ ಮೊಹ್ಮದ್ ಶಮಿ 14 ರನ್ಗಳಿಸಿದ್ದ ಸ್ಯಾಂಟ್ನರ್ ಅವರ ವಿಕೆಟ್ ಪಡೆದು ಒಟ್ಟು ಮೂರು ವಿಕೆಟ್ ಪಡೆದ ಸಾಧನೆ ಮಾಡಿದ್ರು.

ಸೂಪರ್ ಸ್ಪೆಲ್ ಮಾಡಿದ ಮೊಹ್ಮದ್ ಶಮಿ ಆರು ಓವರ್ಗಳನ್ನ ಹಾಕಿ ಮೂರು ವಿಕೆಟ್ ಪಡೆದು ಮಿಂಚಿದ್ರು. ಕೇವಲ 19 ರನ್ ನೀಡಿದ ಸ್ಪೀಡ್ ಸ್ಟಾರ್ 2 ಮೇಡನ್ ಮಾಡಿ 3.16 ಎಕನಾಮಿ ರೇಟ್ ಪಡೆದ್ರು.

100 ವಿಕೆಟ್ ಪಡೆದ ವೇಗದ ಭಾರತೀಯ ಬೌಲರ್
ನೇಪಿಯರ್ ಅಂಗಳದಲ್ಲಿ ಮೂರು ವಿಕೆಟ್ ಪಡೆದ ಶಮಿ ವಿನೂತನ ದಾಖಲೆ ಬರೆದ್ರು. ಮೊದಲ ಓವರ್ನಲ್ಲಿ ಮಾರ್ಟಿನ್ ಗಪ್ಟಿಲ್ ವಿಕೆಟ್ ಪಡೆಯುವ ಮೂಲಕ ಶಮಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ರು. ಜೊತೆಗೆ ತಂಡದ ಪರ ವೇಗವಾಗಿ 100 ವಿಕೆಟ್ ಪಡೆದ ಮೊದಲ ಬೌಲರ್ ಹಿರಿಮೆಗೆ ಪಾತ್ರರಾದ್ರು. ಈ ಹಿಂದೆ ತಂಡದ ಮಾಜಿ ಟeಜಿಣ ಆರ್ಮ್ ಪೇಸರ್ ಇರ್ಫಾನ್ ಪಠಾಣ್ ವೇಗವಾಗಿ 100 ವಿಕೆಟ್ ಪಡೆದ ದಾಖಲೆ ಒಂದಿದ್ರು.
ವೇಗವಾಗಿ 100 ವಿಕೆಟ್ ಪಡೆದವರು

ಬೌಲರ್ಸ್ ಪಂದ್ಯ
ಮೊಹ್ಮದ್ ಶಮಿ 56
ಇರ್ಫಾನ್ ಪಠಾಣ್ 59
ಜಹೀರ್ ಖಾನ್ 65
ಅಜಿತ್ ಅಗರ್ಕರ್ 67
ಜಾವಗಲ್ ಶ್ರೀನಾಥ್ 68

ಸ್ಪೀಡ್ ಸ್ಟಾರ್ ಮೊಹ್ಮದ್ ಶಮಿ 56 ಪಂದ್ಯಗಳನ್ನಾಡಿ ಇದೀಗ ತಂಡದ ಪರ ಅತಿ ವೇಗವಾಗಿ 100 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿದ್ದಾರೆ. ತಂಡದ ಮಾಜಿ ಬೌಲರ್ ಇರ್ಫಾನ್ ಪಠಾಣ್ 59 ಪಂದ್ಯ , ಜಹೀರ್ ಖಾನ್ 65, ಅಜಿತ್ ಅಗರ್ಕರ್ 67, ಜಾವಗಲ್ ಶ್ರೀನಾಥ್ 68 ಪಂದ್ಯಗಳಲ್ಲಿ ವೇಗವಾಗಿ 100 ವಿಕೆಟ್ ಪಡೆದವರಾಗಿದ್ದಾರೆ.

ವೇಗವಾಗಿ ಆರು ವಿಕೆಟ್ ಪಡೆದ ಆರನೇ ಬೌಲರ್
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ವೇಗದ 100ನೇ ವಿಕೆಟ್ ಪಡೆದ ಮೊಹ್ಮದ್ ಶಮಿ ವಿಶ್ವದ ಆರನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿ ನ್ಯೂಜಿಲೆಂಡ್ ತಂಡದ ವೇಗಿ ಟ್ರೆಂಟ್ ಬೌಲ್ಟ್ ಅವರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ 44 ಏಕದಿನ ಪಂದ್ಯಗಳಲ್ಲಿ ವೇಗವಾಗಿ ನೂರು ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ರೆ , ಆಸಿಸ್ ವೇಗಿ ಮಿಶೆಲ್ ಸ್ಟಾರ್ಕ್ 52, ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ 53, ನ್ಯೂಜಿಲೆಂಡ್ ತಂಡದ ಶೇನ್ ಬಾಂಡ್ 54, ಬ್ರೇಟ್ ಲೀ 55 ಏಕದಿನ ಪಂದ್ಯಗಳಲ್ಲಿ ವೇಗವಾಗಿ ನೂರು ವಿಕೆಟ್ ಪಡೆದರಾಗಿದ್ದಾರೆ.
ಈ ಅದ್ಬುತ ಪ್ರದರ್ಶನದ ಮೂಲಕ ಮೊಹ್ಮದ್ ಶಮಿ ಮುಂಬರುವ ವಿಶ್ವಕಪ್ನಲ್ಲಿ ಭುವಿ ಬುಮ್ರಾ ಅಲ್ಲದೇ ತಂಡದ ಪರ ಪ್ರಮುಖ ಬೌಲರ್ ರಾಗುವ ಸೂಚನೆ ಕೊಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ