ಕಣಿವೆ ರಾಜ್ಯದಲ್ಲಿ ಹಿಮಪಾತದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜನರು

ಶ್ರೀನಗರ, ಜ.22- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಮಪಾತ ಮುಂದುವರಿದಿದ್ದು, ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೆ ಹಿಮಪಾತದಿಂದ ಖ್ವಾಜಿಗುಂಡ್ ಪ್ರದೇಶದಲ್ಲಿನ ಜವಹರ್ ಸುರಂಗ ಮಾರ್ಗದ ಎರಡೂ ಕಡೆ ಹಿಮಬಂಡೆಗಳು ಬಿದ್ದಿರುವುದರಿಂದ ಶ್ರೀನಗರ-ಜಮ್ಮು ರಾಷ್ಟೀಯ ಹೆದ್ದಾರಿ ಮುಚ್ಚಲ್ಪಟ್ಟಿದೆ. ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ವಾಹನಗಳ ಸವಾರರು ಮತ್ತು ಪ್ರಯಾಣಿಕರು ಅತಂತ್ರರಾಗಿದ್ದಾರೆ.

ಪ್ರತಿಕೂಲ ಹವಾಮಾನ ಮತ್ತು ಹಿಮಪಾತದಿಂದ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ರಕ್ಷಣಾ ಕಾರ್ಯಕರ್ತರು ಹರಸಾಹಸ ಪಡುತ್ತಿದ್ದಾರೆ. ಹಿಮ ರಾಶಿಯನ್ನು ತೆರವುಗೊಳಿಸಲು ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ.

ಪ್ರಾಥಮಿಕ ವರದಿಗಳ ಪ್ರಕಾರ ಹಿಮಪಾತದಿಂದ ಯಾವುದೇ ಸಾವು-ನೋವಿನ ವರದಿಗಳಿಲ್ಲ.

ಹಿಮಾಚಲದಲ್ಲೂ ಮುಂದುವರಿದ ಪ್ರತಿಕೂಲ ಹವಾಮಾನ :
ಅತ್ತ ಹಿಮಾಚಲ ಪ್ರದೇಶದಲ್ಲಿ ತೀವ್ರ ಶೀತಗಾಳಿ, ಹಿಮಪಾತ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ