ಚಳಿಗಾಲದ ದೂಡ್ಡ ಸಮಸ್ಯೆಯಾದ ಆಸ್ಟಿಯೊಪೊರೋಸಿಸ್/ಅಸ್ಥಿರಂದ್ರತೆಯ ಆರೈಕೆ

ಆಸ್ಟಿಯೊಪೊರೋಸಿಸ್ ಶರೀರದ ಮೂಳೆಗೆ ಸಂಭಂದ ಪಟ್ಟ ವ್ಯಾದಿ. ಹೆಚ್ಚಾಗಿರುವ ಅಸ್ಥಿ ದೌರ್ಬಲ್ಯದ ಕಾರಣದಿಂದಾಗಿ ಮೂಳೆ ಮುರಿತ ಅಥವ ಮೂಳೆ ಸೀಳುಬಿಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆಸ್ಟಿಯೊಪೊರೋಸಿಸ್ ಹೆಚ್ಚಾಗಿ ವೃದ್ದ ಮಹಿಳೆಯರಲ್ಲಿ ಕಂಡು ಬರುತ್ತದೆ. ಋತುಬಂಧ(ಮೆನೋಪಸ್ಸ್) ವಾದ ನಂತರ ದೇಹದ ಈಸ್ಟ್ರೋಜನ್ ಹಾರ್ಮೋನಿನ ಕೂರತೆಯಿಂದಾಗಿ ಮೂಳೆಯ ದೌರ್ಬಲ್ಯ ಹಾಗು ಮೂಳೆಯ ಸಾಂದ್ರತೆ ಕೆಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಮೂಳೆಯು ಸುಲಭವಾಗಿ ಬಿರುಕು/ಮುರಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆಯುರ್ವೇಧದ ಪ್ರಕಾರ ವಾಯುವಿನ ಅಸಮತೋಲನೆಯ ಕಾರಣದಿಂದಾಗಿ ಅಸ್ಥಿಧಾತುವಿನ ಜೀವಕೋಶದ ಸಾಂದ್ರತೆ ಹಾಗು ಸಮೂಹ ಕಡಿಮೆಯಾಗುತ್ತದೆ.
ಸಪ್ತಧಾತುಗಳಲ್ಲಿ ಅಸ್ಥಿಧಾತು 5 ನೇ ಸ್ಥಾನ ಪೆಡೆದಿದ್ದು ಹೆಚ್ಚಾಗುವ ವಾಯುವಿನ ಕಾರಣದಿಂದಾಗಿ ಅಸ್ಥಿಕ್ಷಯ ಅಥವ ಅಸ್ಥಿಶೌಶ್ಯತೆ ಕಂಡುಬರುತ್ತದೆ.

“ತಡೆಗಟ್ಟುವಿಕೆಯು ಚಿಕಿತ್ಸೆಗಿಂತ ಉತ್ತಮವಾದುದು” ಎಂಬಂತೆ ಶರೀರದಲ್ಲಿ ವಾತ ದೋಷದ ಸಮತೋಲನೆ ಕಾಪಾಡುವುದು ಅವಶ್ಯಕ. ವಾತ ದೋಷವು ಶೀತ, ಶುಷ್ಕವಾಗಿರುವ ಕಾರಣದಿಂದಾಗಿ ಅತಿಶೀತವಾದ ಆಹಾರ, ಪಾನಿಯದ ಸೇವನೆಯಿಂದಾಗಿ ಹಾಗು ಚಳಿಗಾಲದಲ್ಲಿ ಹೆಚ್ಚಾಗಿರುವ ಶೀತ ಹಾಗು ಶುಷ್ಕ ವಾತಾವರಣ   ದಿಂದಾಗಿ ದೇಹದ ವಾತ ದೋಷವು ಹೆಚ್ಚಾಗಿ ಆಸ್ಟಿಯೊಪೊರೋಸಿಸ್ ಕಂಡುಬರುತ್ತದೆ. ಈ ವಾತ ದೋಷವನ್ನು ಕಡಿಮೆಮಾಡಲು ಬೆಚ್ಚಗಿರುವ ಹಾಗು ಹೆಚ್ಚ ಸ್ನಿಗ್ದ ಅಥವ ತೈಲದ ಅಂಶವಿರುವ ಆಹಾರ ಸೇವನೆ ಮಾಡಬೇಕು.

ನಮಗೆಲ್ಲರಿಗು ತಿಳಿದಿರುವ ಹಾಗೆ ಹಾಲಿನ ಸೇವನೆಯಿಂದಾಗಿ ಕ್ಯಾಲ್ಸಿಯಮ್ ಅಂಶ ಹೆಚ್ಚು ದೇಹಕ್ಕೆ ಒದಗಿಸಿ ಆಸ್ಟಿಯೊಪೂರೋಸಿಸ್ ಕಡಿಮೆಮಾಡುತ್ತದೆ. ಆದರೆ ವೃದ್ದರು ಹೆಚ್ಚು ಹಾಲು ಸೇವಿಸುವುದರಿಂದ ದೇಹದಲ್ಲಿನ ಕಫದೋಷ ಹೆಚ್ಚಾಗುತ್ತದೆ. ಆದುದರಿಂದ ಯಾವ ಗಿಡಮೂಲಿಕೆಯನ್ನು ಹಾಲಿಗೆ ಬೆರಸಿ ಸೇವಿಸುವುದರಿಂದ ಹಾಲಲ್ಲಿನ ಕಫವೃಧ್ದಿಸುವ ಗುಣ ಕಡಿಮೆ ಮಾಡಿ ಕೇವಲ ವಾತ ದೋಷವನ್ನು ನಿಯಂತ್ರಿಸಬೇಕೆಂಬುದನ್ನು ಆಯುವರ್ೇದ ತಙ್ಞರ ಸಲಹೆ ಸೂಚನೆ ಕೇಳಿ ತಿಳಿದುಕೂಳ್ಳುವುದು ಉಚಿತ.

ಕಾಯಿಸಿರುವ ಹಾಲಿಗೆ ಈ ಕೆಳಕಂಡ ಮೂಲಿಕೆಗಳನ್ನು ಬೆರಸಿ ಸೇವಿಸಬಹುದು

1. ಸಮಪ್ರಮಾಣದಲ್ಲಿ ಏಲಕ್ಕೆ, ಚೆಕ್ಕೆ, ಕಾಳುಮೆಣಸು, ಅರಿಶಿಣ ಹಾಗು ವಣಶುಂಠಿಯ ಪುಡಿ ತಯಾರುಮಾಡಿಟ್ಟಿಕೊಳ್ಳಿ. ಬೆಳಿಗೆ ಹಾಗು ರಾತ್ರಿ ಹಾಲು ಸೇವಿಸುವಾಗ 1 ಚಿಟಕಿಯಷ್ಟು ಈ ಮಿಶ್ರಣವನ್ನು 200 ಎಮ್.ಎಲ್ ಹಾಲಿನಲ್ಲಿ ಬೆರಸಿ ಸೇವಿಸಬೇಕು. ಇದರಿಂದ ಹಾಲಿನಸೇವನೆಯಿಂದಾಗಿ ಶರೀರದ ಕಫದೋಷ ಹೆಚ್ದಿರುವಹಾಗೆ ನಿಯಂತ್ರಿಸುತ್ತದೆ.

2. ಅಮೃತವಳ್ಳಿ- ಮೂಳೆಯ ಮೇಲಿನ ಈಸ್ಟ್ರೋಜನ್ ಪರಿಣಾಮವನ್ನು ಅಮೃತವಳ್ಳಿ ಬೀರುವ ಕಾರಣದಿಂದಾಗಿ ಆಸ್ಟಿಯೊಪೊರೋಸಿಸ್ ನಿಯಂತ್ರಣದಲ್ಲಿರಸಲು ಸಹಾಯಕಾರಿ.
1/2 ಚಮಚ ಅಮೃತವಳ್ಳಿಯ ಕಾಂಡದ ಪುಡಿಯನ್ನು 200 ಎಮ್.ಎಲ್ ಬಿಸಿ ಹಾಳಿಗೆ ಹಾಕಿ. ಹಾಲು ತಣ್ಣಗಾದ ನಂತರ 1 ಚಮಚ ಜೇನುತುಪ್ಪವನ್ನು ಬೆರಸಿ ಬೆಳಗೆ ಖಾಲಿ ಹೂಟ್ಟೆಯಲ್ಲಿ ಸೇವಿಸಿ.

3. ಅಶ್ವಗಂಧ- ಅಶ್ವಗಂಧದ ಯಾಂಟಿ ಆಸ್ಟಿಯೊಪೊರೋಸಿಸ್ ಹಾಗು ಫೈಟೋ ಈಸ್ಟ್ರೋಜನ್ ಗುಣದ ಕಾರಣದಿಂದಾಗಿ ಮೂಳೆಗಳು ಬಲಿಷ್ಟಗೂಳ್ಳುವಂತೆ ಅನುಕೂಲಮಾಡುತ್ತದೆ. 1/2 ಚಮಚ ಅಶ್ವಗಂಧ ಚೂರ್ಣವನ್ನು 200 ಎಮ್.ಎಲ್ ಬಿಸಿ ಹಾಲಿಗೆ ಸೇರಿಸಿ, ಹಾಲು ತಣ್ಣಗಾದ ಬಳಿಕ 1 ಚಮಚ ಜೇನು ತುಪ್ಪ, 1/2 ಚಮಚ ಬೆಲ್ಲಾ ಸೇರಿಸಿ ರಾತ್ರಿ ಮಲಗುವ ಮುನ್ನಾ ಸೇವಿಸುವುದರಿಂದ ಆಸ್ಟಿಯೊಪೊರೋಸಿಸ್ನ ಲಕ್ಷಣ ಕ್ರಮೇಣ ಕಡಿಮೆಯಾಗುತ್ತದೆ.

ನಿತ್ಯ ಬೆಳಗೆ ಖಾಲಿ ಹೂಟ್ಟೆಯಲ್ಲಿ 1 ಚಮಚ ಹುರಿದ ಬಿಳಿ ಎಳ್ಳನ್ನು ಸೇವಿಸುವುದರಿಂದ ಸುಮಾರು 1000 ಎಮ್.ಜಿ ಯಷ್ಟು ಕ್ಯಾಲ್ಸಿಯಮ್ ದೇಹಕ್ಕೆ ದೂರೆಯುತ್ತದೆ.

ಆಸ್ಟಿಯೊಪೊರೋಸಿಸ್ನಿಂದ ಬಳಲುತ್ತಿರುವವರು ಈ ಕೆಳಗಿನ ಪಥ್ಯಾ, ಅಪಥ್ಯವನ್ನು ಪರಿಪಾಲಿಸಬೇಕು.
ಪಥ್ಯ- ಆಹಾರಗಳಲ್ಲಿ ಹೇರಳವಾಗಿ ಕ್ಯಾಲ್ಸಿಯಮ್ ಅಂಶ ದೂರಕುವಂತಹ ಕಪ್ಪು ದ್ರಾಕ್ಷಿ, ಮೂಲಂಗಿ, ಬೀಟ್ರೋಟ್, ಕಬ್ಬು, ಶುಂಠಿ, ಬೆಳ್ಳುಳ್ಳಿ, ಹೆಸರು ಕಾಳು. ನುಗ್ಗೆಕಾಯಿ ಇತ್ಯಾದಿಯ ಬಳಿಕೆಯನ್ನು ಹೆಚ್ಚು ಮಾಡಬೇಕು.

ವಾರದಲ್ಲಿ 2 ಭಾರಿಯಾದರು ಎಳ್ಳೆಣ್ಣೆಯಿಂದ ಅಭ್ಯಂಜನ ಮಾಡಬೇಕು.

ಅಪಥ್ಯ- ಮಧ್ಯಪಾನ, ಶುಶ್ಕ ಮಾಂಸಾಹಾರ, ಶಿತವಾದ ಆಹಾರ ಹಾಗು ಪಾನಿಯ ಸೇವನೆ, ಹೆಚ್ಚು ವ್ಯಾಯಾಮ ಮಾಡುವುದು, ಮಧ್ಯಾಹ್ನ ಮಲಗುವುದು ಹಾಗು ತಡರಾತ್ರಿ ಮಲಗುವ ಜೀವನ ಶೈಲಿ. ಈ ಎಲ್ಲಾಕಾರಣದಿಂದಾಗಿ ಆಸ್ಟಿಯೊಪೊರೋಸಿಸ್ನ ಸಮಸ್ಯೆ ಹೆಚ್ಚುತ್ತದೆ.

ಶರೀರದಲ್ಲಿ ಕ್ಯಾಲ್ಸಿಯಂ ಅಂಶಹಿರಿಕೂಳ್ಳುವ ಪ್ರಕ್ರಿಯೆಗೆ ವಿಟಮಿನ್ ಡಿ ಅತ್ಯಾವಶ್ಯಕ. ಆದುದರಿಂದ ಎಳ್ಳೆಣ್ಣೆಯಿಂದ ಅಭ್ಯಂಜನ ಮಾಡಿದ ಬಳಿಕ 30 ನಿಮಿಷ ಬೆಳಗಿನ ಸೂರ್ಯನಕಿರಣ ಸೇವಿಸುವುದರಿಂದ (ಆತಾಪ ಸೇವನೆ) ದೇಹಕ್ಕೆ ಬೇಕಾಗಿರುವ ವಿಟಮಿನ್ ಡಿ ಸುಲಭವಾಗಿ ದೂರೆಯುತ್ತದೆ.

ಆಸ್ಟಿಯೊಪೊರೋಸಿಸ್ ನಿಯಂತ್ರಣದಲ್ಲಿಟ್ಟಿಕೊಳ್ಳಲು ನಿತ್ಯ ಮಾಡಬೇಕಾದ ಆಸನಗಳು ಈ ಕೆಳಗಿನಂತಿದೆ.
ಪವನಮುಕ್ತಾಸನ
ಮರೀಚಾಸನ-3
ವೀರಭದ್ರಾಸನ-2
ಪಾರ್ಶಕೋಣಾಸನ
ಗರುಡಾಸನ
ಶಲಭಾಸನ

ಲೇಖಕರು
ಡಾ. ಸಿಂಧು ಪ್ರಶಾಂತ್
ಬಿ.ಎ.ಎಮ್.ಎಸ್, ಎಮ್.ಡಿ( ಎ.ಎಮ್),ಎಮ್.ಎಸ್ಸಿ(ಯೋಗ)
ದೂರವಾಣಿ-9743857575
ವೆಬ್ಸೈಟ್-www.yogaforpregnant.com

ಆಯುರ್ವೇಧದ ಹಾಗು ಯೋಗದ ಕ್ಷೇತ್ರದಲ್ಲಿ ಕಳೆದ 9 ವರ್ಷಗಳಿಂದ ಸಾಧನೆ ಮಾಡುತ್ತಿರುವ ಡಾ. ಸಿಂಧು ಪ್ರಶಾಂತರವರು ಹೆಸರಾಂತ ಆಯುರ್ವೇಧದ ತಙ್ಞೆ. ಕ್ರಾನಿಕ್ ಡಿಸೀಸ್(ಧೀರ್ಘಕಾಲದ ಕಾಯಿಲೆ), ಪ್ರಿವೆಂಟಿವ್ ಕೇರ್( ರೋಗ ನಿವಾರಣೆ ಹಾಗು ರೋಗಿಯ ಆರೈಕೆ), ಆಯುರ್ವೇಧದ ಪಥ್ಯಾ/ಅಪಥ್ಯಾ, ಒತ್ತಡ ನಿರ್ವಹಣೆ, ಲೈಫ್ ಸ್ಟೈಲ್ ಮ್ಯಾನೆಜ್ಮೆಂಟ್ಗಳ ಬಗ್ಗೆ ವಿಸ್ತಾರವಾದ ಅನುಭವವಿದ್ದು, ಹಲವಾರು ಅಸ್ವಸ್ಥರನ್ನು ಗುಣಮುಖವಾಗಿಸಿದ್ದಾರೆ ಹಾಗು ಗರ್ಭಿಣಿಯರ ಯೋಗದ ಬಗ್ಗೆ ವ್ಯಾಪಕ ಅಧ್ಯಯನ ಮಾಡಿ ಅತಿ ಶೀರ್ಘದಲ್ಲಿಯೇ ಅದರ ಮೇಳೆ ಬರೆದಿರುವ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ