ನವದೆಹಲಿ, ಜ.22- ಮಾಸಿಕ ಆದಾಯ ತೆರಿಗೆ ಮಿತಿಯನ್ನು ಈಗಿನ ಎರಡೂವರೆ ಲಕ್ಷ ರೂಪಾಯಿಂದ 5 ಲಕ್ಷಕ್ಕೆ ಏರಿಸಲು ಕೇಂದ್ರ ಸರ್ಕಾರ ಚಿಂತಿಸಿದೆ.
ಸದ್ಯ ಎರಡೂವರೆ ಲಕ್ಷ ರೂಪಾಯಿವರೆಗಿನ ವಾರ್ಷಿಕ ಆದಾಯವು ತೆರಿಗೆ ಮುಕ್ತವಾಗಿದೆ. ಎರಡೂವರೆ ಲಕ್ಷ ಮೇಲ್ಪಟ್ಟವರ ಆದಾಯವು ಶೇಕಡಾ 5ರಷ್ಟು ತೆರಿಗೆಗೆ ಒಳಪಡುತ್ತಿದೆ. 5ರಿಂದ 10 ಲಕ್ಷರೂಪಾಯಿ ವರೆಗಿನ ವಾರ್ಷಿಕ ಆದಾಯ ಇರುವ ವೇತನದಾರರ ಮೇಲೆ ಶೇಕಡಾ 20ರಷ್ಟು ಆದಾಯ ತೆರಿಗೆ ಬೀಳುತ್ತಿದೆ. 5 ಲಕ್ಷರೂಪಾಯಿ ವರೆಗಿನ ವಾರ್ಷಿಕ ಆದಾಯ ತೆರಿಗೆ ಮುಕ್ತವಾಗಿರುವುದು ಕೇವಲ 80 ವರ್ಷ ದಾಟಿದವರಿಗೆ ಮಾತ್ರ 2018ರ ಬಜೆಟ್ನಲ್ಲಿ ಹಣಕಾಸು ಸಚಿವ ಅರುಣ್ಜೇಟ್ಲಿ ಈ ವರ್ಷದಲ್ಲಿ ವೈಯಕ್ತಿಕ ತೆರಿಗೆ ಸ್ಲ್ಯಾಬ್ನಲ್ಲಿ ಯಾವುದೆ ಬದಲಾವಣೆಯಾಗುವುದಿಲ್ಲ ಅಂತ ಘೋಷಿಸಿದ್ದರು. ಆದರೆ, 2017ರ ಬಜೆಟ್ನಲ್ಲಿ 2.5 ಲಕ್ಷ ರೂಪಾಯಿಯಿಂದ 5 ಲಕ್ಷ ಆದಾಯ ಹೊಂದಿರುವವರಿಗೆ ಶೇ.10 ರಷ್ಟಿದ್ದ ತೆರಿಗೆಯನ್ನ ಶೇ.5ಕ್ಕೆ ಇಳಿಸಲು ಚಿಂತನೆ ನಡೆಸಿದ್ದರು.