ಪ್ರಸ್ತುತ ಭಾರತದಲ್ಲಿಯೇ ವಿಶ್ವ ದರ್ಜೆ ಮಟ್ಟದ ವಿಶ್ವವಿದ್ಯಾಲಯಗಳಿವೆ : ಸುಷ್ಮಾ ಸ್ವರಾಜ್

ವಾರಣಾಸಿ, ಜ.22- ಉನ್ನತ ಶಿಕ್ಷಣದಲ್ಲಿ ಉತ್ತಮ ಅವಕಾಶದ ಹುಡುಕಾಟಕ್ಕಾಗಿ ಅನೇಕ ಮಂದಿ ಭಾರತ ತೊರೆಯುತ್ತಿದ್ದಾರೆ. ಪ್ರಸ್ತುತ ಭಾರತದಲ್ಲಿಯೇ ವಿಶ್ವ ದರ್ಜೆ ಮಟ್ಟದ ವಿಶ್ವವಿದ್ಯಾಲಯಗಳ ಸೌಕರ್ಯ ಹಾಗೂ ಐಐಟಿ, ಐಐಎಂನಂತಹ ಶಿಕ್ಷಣ ಸಂಸ್ಥೆಗಳಿಂದ ಸಂಶೋಧನಾ ಅಭಿವೃದ್ಧಿ ಶಿಕ್ಷಣ ದೊರೆಯುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಶಿಕ್ಷಣಕ್ಕಾಗಿ ಬೇರೆ ರಾಷ್ಟ್ರಗಳಿಗೆ ವಲಸೆ ಹೋದವರು ಭಾರತಕ್ಕೆ ಕೀರ್ತಿಯನ್ನು ತಂದಿದ್ದಾರೆ ಎಂದು ಸುಷ್ಮಾ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರವಾಸಿ ಭಾರತೀಯ ದಿವಸ್ ಆಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಭಾರತ ಮೂಲದ ಯುವಕರು ಸಿಇಒ ಆಗಿದ್ದಾರೆ. ಗೂಗಲ್ ಸಂಸ್ಥೆಯ ಸುಂದರ್ ಪಿಳ್ಳೈ, ಮೈಕ್ರೋ ಸಾಫ್ಟ್ ಕಂಪನಿಯ ಸತ್ಯ ನಾಡೆಲ್, ಐಎಂಎಫ್ ಮುಖ್ಯಸ್ಥೆ ಗೀತಾ ಗೋಪಿನಾಥ್ ಮತ್ತಿತರರು ಅನನ್ಯ ಸಾಧನೆ ಮಾಡಿದ್ದು, ನಮ್ಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.

ವಲಸೆ ಹೋಗಿರುವ ಪ್ರತಿಯೊಬ್ಬ ಭಾರತೀಯರು ತಮ್ಮ ಬದ್ಧತೆ, ಉತ್ಸಾಹ ಹಾಗೂ ತಾಳ್ಮೆ, ಹಾಗೂ ಶ್ರಮದಿಂದ ಯಶಸ್ಸು ಸಾಧಿಸಿರುವುದಾಗಿ ವಿದೇಶಾಂಗ ಸಚಿವರು ತಿಳಿಸಿದರು.

ಪ್ರವಾಸಿ ಭಾರತೀಯ ದಿವಸ ಯುವಕರಿಗೆ ಪ್ರಮುಖವಾದ ಕಾರ್ಯಕ್ರಮವಾಗಿದೆ. ಇದು ಮಾರ್ಗ ತೋರಿಸುವುದು ಮಾತ್ರವಲ್ಲದೇ, ನವ ಭಾರತ ನಿರ್ಮಾಣದಲ್ಲಿ ಹೇಗೆ ಭಾಗವಾಗಬಹುದು ಎಂಬುದರ ಬಗ್ಗೆ ಕಲಿಸುತ್ತದೆ. ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ, ಸ್ಟಾರ್ಟ್ ಆಫ್ ಮತ್ತಿತರ ಅವಕಾಶಗಳ ಬಗ್ಗೆಯೂ ತಿಳಿಸುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ