ನವದೆಹಲಿ, ಜ.22- ಕೇಂದ್ರದ ಮಾಜಿ ಸಚಿವ ಮತ್ತು ಮಾಜಿ ಸಂಪಾದಕ ಎಂ.ಜೆ.ಅಕ್ಬರ್ ಪತ್ರಕರ್ತೆಯೊಬ್ಬರ ವಿರುದ್ಧ ಹೂಡಿರುವ ಮಾನಹಾನಿ ಪ್ರಕರಣ ಸಂಬಂಧ ಆಕೆಗೆ ಸಮನ್ಸ್ ಜಾರಿಗೊಳಿಸುವ ಕುರಿತ ತನ್ನ ತೀರ್ಪನ್ನು ನ್ಯಾಯಾಲಯವೊಂದು ಕಾಯ್ದಿರಿಸಿದೆ.
ಪತ್ರಕರ್ತೆ ಪ್ರಿಯಾ ರಮಣಿ ತಮ್ಮ ಮೇಲೆ ಅಕ್ಬರ್ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಆರೋಪಗಳನ್ನು ಅಲ್ಲಗಳೆದ ಅಕ್ಬರ್ ಪತ್ರಕರ್ತೆ ವಿರುದ್ಧ ಮಾನಹಾನಿ ದಾವೆ ದಾಖಲಿಸಿ ಆಕೆಗೆ ಸಮನ್ಸ್ ನೀಡುವಂತೆ ಕೋರಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೋ ಪಾಲಿಟನ್ ದಂಡಾಧಿಕಾರಿ ಸಮರ್ವಿಶಾಲ್ ವಾದ-ಪ್ರತಿವಾದಗಳನ್ನು ಆಲಿಸಿ ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದಾರೆ.