ಪ್ರಯಾಗರಾಜ್: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಅರ್ಧ ಕುಂಭಮೇಳದಿಂದ ರಾಜ್ಯ ಸರ್ಕಾರಕ್ಕೆ 1.2 ಲಕ್ಷ ಕೋಟಿ ರೂ. ಆದಾಯ ಸಂಗ್ರಹವಾಗಲಿದೆ ಎಂದು ಭಾರತೀಯ ಕೈಗಾರಿಕೆ ಒಕ್ಕೂಟ (ಸಿಐಐ) ಹೇಳಿದೆ.
50 ದಿನಗಳಲ್ಲಿ ಹತ್ತಾರು ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತದೆ. ಪ್ರವಾಸ ಮಾರ್ಗದರ್ಶಕರು, ಟ್ಯಾಕ್ಸಿ ಚಾಲಕರು, ಸ್ವಯಂಸೇವಕರು ಸೇರಿ ಅಸಂಘಟಿತ ಕಾರ್ವಿುಕ ವಲಯಕ್ಕೆ ಭಾರಿ ಉದ್ಯೋಗಾವಕಾಶಗಳು ಸಿಗಲಿದೆ ಎಂದು ಸಿಐಐ ವರದಿ ಉಲ್ಲೇಖಿಸಿದೆ. 2013ರ ಕುಂಭಮೇಳಕ್ಕೆ ರಾಜ್ಯ ಸರ್ಕಾರ ಖರ್ಚು ಮಾಡಿದ್ದಕ್ಕಿಂತ ಮೂರು ಪಟ್ಟು ಈ ಬಾರಿ ವೆಚ್ಚ ಮಾಡಲಾಗುತ್ತಿದೆ. ಸಿಎಂ ಯೋಗಿ ಆದಿತ್ಯನಾಥ ಒಟ್ಟು 4200 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.
ಉತ್ತರಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ನೆರೆ ರಾಜ್ಯಗಳಾದ ರಾಜಸ್ಥಾನ, ಉತ್ತರಾಖಂಡ, ಪಂಜಾಬ್, ಹಿಮಾಚಲ ಪ್ರದೇಶದ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡುವುದರಿಂದ ಅಲ್ಲಿಯೂ ಪ್ರವಾಸೋದ್ಯಮ ಆದಾಯ ಹೆಚ್ಚಲಿದೆ ಎನ್ನಲಾಗಿದೆ.
prayagraj,ardha kumbhamela