ಮೇಘಾಲಯ ಕಲ್ಲಿದ್ದಲು ಗಣಿ ದುರಂತ: ರಕ್ಷಣಾ ಕಾರ್ಯಾಚಾರಣೆ ಕೈಬಿಟ್ಟ ನೌಕಾ ಪಡೆ

ಶಿಲ್ಲಾಂಗ್​: ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಪತ್ತೆಯಾಗಿದ್ದ ಕಾರ್ಮಿಕನೊಬ್ಬನ ಮೃತದೇಹವನ್ನು ಮೇಲೆತ್ತುವ ಕಾರ್ಯದೊಂದಿದೆ ನೌಕಾ ಪಡೆ ರಕ್ಷಣಾ ಕಾರ್ಯಾಚರಣೆ ಕೈಬಿಟ್ಟಿದೆ.

ಕಲ್ಲಿದ್ದಲು ಗಣಿಯಲ್ಲಿ ಕಳೆದ ಡಿಸೆಂಬರ್​ 13ರಂದು ಸಂಭವಿಸಿದ್ದ ಅವಘಡದಲ್ಲಿ 15 ಕಾರ್ಮಿಕರು ಸಿಲುಕಿಕೊಂಡಿದ್ದರು. ಅವರನ್ನು ರಕ್ಷಿಸುವ ಕಾರ್ಯ ಕುಂಟುತ್ತಾ ಸಾಗಿತ್ತು. ಹೀಗಿರುವಾಗಲೇ ಜ.18ರಂದು ನೀರು ತುಂಬಿರುವ ಗಣಿಯ ಆಳದಲ್ಲಿ ಕಾರ್ಮಿಕನೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಕಳೆದ ಮೂರು ದಿನಗಳಿಂದಲೂ ದೇಹಯವನ್ನು ಮೇಲೆತ್ತುವ ಕಾರ್ಯವನ್ನು ರಕ್ಷಣಾ ಪಡೆಗಳು ಆರ್​ಒವಿ ಯಂತ್ರಗಳ ಮೂಲಕ ನಡೆಸುತ್ತಿವೆ. ಆದರೆ, ಯಂತ್ರಗಳು ಪ್ರಯತ್ನ ನಡೆಸಿದಾಗೆಲ್ಲ ದೇಹ ಛಿದ್ರವಾಗುತ್ತಿದೆ. ಹೀಗಾಗಿ ದೇಹವನ್ನು ಮೇಲೆತ್ತುವ ಕಾರ್ಯವನ್ನು ನಿಲ್ಲಿಸಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡ ತಿಳಿಸಿದೆ.

ದೇಹವನ್ನು ಮೇಲೆತ್ತುವಂತೆ 15 ಕಾರ್ಮಿಕರ ಕುಟುಂಬಗಳ ಪೈಕಿ ನಾಲ್ಕು ಕುಟುಂಬಗಳು ಶನಿವಾರ ರಕ್ಷಣಾ ತಂಡವನ್ನು ಒತ್ತಾಯಿಸಿದ್ದವು. ಆದರೆ, ಆ ಪ್ರಯತ್ನ ವಿಫಲವಾಗಿದೆ.

Navy Stops Operation To Pull Out Decomposed Body From Meghalaya Mine

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ