ಬೆಂಗಳೂರು, ಜ.21-ಗ್ರಾಹಕ ಸ್ನೇಹಿಯಾಗುವ ನಿಟ್ಟಿನಲ್ಲಿ ಗ್ರಾಹಕರಲ್ಲಿ ಜಾಗೃತಿ ಮೂಲಕ ವಾಣಿಜ್ಯ ವಹಿವಾಟುಗಳನ್ನು ಸುಸೂತ್ರವಾಗಿ ನಡೆಸಲು ಅನುವಾಗುವ ರೀತಿ ಕರ್ನಾಟಕ ರಾಜ್ಯ ಗ್ರಾಹಕ ಹಕ್ಕುಗಳ ಸಂಸ್ಥೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ನವೀನ್ ಅಗರ್ವಾಲ್ ತಿಳಿಸಿದರು.
ರಾಜ್ಯ ಅಧ್ಯಕ್ಷರಾಗಿ ಮಹೇಶ್ವರಿ ವಾಲಿ, ಕಾರ್ಯಾಧ್ಯಕ್ಷ ಕೆ.ಹರೀಶ್, ಮಹಿಳಾ ವಿಭಾಗಕ್ಕೆ ಪೂರ್ಣಿಮಾ ದತ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಅವರನ್ನು ನೇಮಿಸಲಾಗಿದೆ ಎಂದರು.
ಗ್ರಾಹಕರ ಸಮಸ್ಯೆ ಮತ್ತು ದೂರುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ಹಾಗೂ ಪ್ರತಿ ಗ್ರಾಹಕರು ಅವರ ಹಕ್ಕನ್ನು ಚಲಾಯಿಸಲು ಅವರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.