ತಿಪಟೂರು ,ಜ.21- ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಬಳುವನೇರಲು ಗ್ರಾಮದ ಭಾರತೀಯ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕ್ನಲ್ಲಿ ಕಳ್ಳರಿಂದ ಕಳ್ಳತನ ಯತ್ನ ನಡೆದಿದೆ.
ಕಳ್ಳರು ಬ್ಯಾಂಕಿನ ಮುಂಬಾಗಿಲ ಬೀಗವನ್ನು ಮುರಿದು ಒಳಬಾಗಿಲನ್ನುತೆರೆಯುವುದಕ್ಕೆ ಯತ್ನಿಸದ್ದಾರೆ. ಸಾರ್ವಜನಿಕರನ್ನುರಸ್ತೆಯಲ್ಲಿತಿರುಗಾಡುತ್ತಿರುವುದನ್ನು ಗಮನಿಸಿದ ಕಳ್ಳರು ಬಂದದಾರಿಗೆ ಸುಂಕವಿಲ್ಲಎಂಬಂತೆ ವಾಪಸ್ಸಾಗಿದ್ದಾರೆ.
ಈ ಸಂಬಂಧ ಹೊನ್ನವಳ್ಳಿ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.