ನಾಳೆ ವಿಶ್ವ ಮೈತ್ರಿ ಟ್ರಸ್ಟ್ನ ಮೊದಲನೆ ವಾರ್ಷಿಕೋತ್ಸವ ಸಂಭ್ರಮಾಚರಣೆ

ಬೆಂಗಳೂರು, ಜ.21- ಯಲಹಂಕದ ಗುಡದಹಳ್ಳಿಯ ವಿಶ್ವ ಮೈತ್ರಿ ಟ್ರಸ್ಟ್‍ನ ಮೊದಲನೆ ವಾರ್ಷಿಕೋತ್ಸವ ಸಂಭ್ರಮಾಚರಣೆ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ನಾಳೆ ಸಂಜೆ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಭಾರತೀಯ ಮಾತಾಂಗಿ ಗುರು ಪೀಠದ ಶ್ರೀ ಆದಿತ್ಯಾನಂದ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮವನ್ನು ಮಾಜಿ ಸಚಿವ ಎಚ್.ಆಂಜನೇಯ ಉದ್ಘಾಟಿಸಲಿದ್ದು , ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರಂಭದಲ್ಲಿ ಜಾನಪದ ಗಾಯಕಿ ಲಕ್ಷ್ಮಮ್ಮ , ಗಾಯಕ ದೊಡ್ಡಪ್ಪ ಮಾದಾರ್, ವೈ.ಜಿ.ಉಮಾ, ಕುಸ್ತಿ ಪಟು ಪೈ.ಪುಟ್ಟರಾಜು ಅವರಿಂದ ಸನ್ಮಾನಿಸಲಾಗುತ್ತಿದ್ದು, ಮತ್ತು ಸಮೂಹ ಮಾಧ್ಯಮ ಸದ್ಬಳಕೆ ಕುರಿತು ಚಿಂತಕ ಯೋಗೇಶ್ ಮಾಸ್ಟರ್ ಮಾತನಾಡಲಿದ್ದಾರೆ. ಇದರಲ್ಲಿ ಲೋಕೇಶ್ ಅನಿಲ್ ಕಟ್ಟಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಟ್ರಸ್ಟ್‍ನ ಅಧ್ಯಕ್ಷ ಮನು ಸಿದ್ದಾರ್ಥ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ