ಪ್ರಯಾಗ್‌ರಾಜ್: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭ ಮೇಳ ಮುಗಿದ ಬಳಿಕ ಸಾಧು-ಸಂತರು ಅಯೋಧ್ಯೆಗೆ ತೆರಳಿ, ರಾಮ ಮಂದಿರ ನಿರ್ಮಾಣ ಕಾಮಗಾರಿ ಆರಂಭಿಸಲಿದ್ದಾರೆ ಎಂದು ಅಖಿಲ ಭಾರತೀಯ ಅಖಾರಾ ಪರಿಷತ್ (ಎಬಿಎಪಿ) ಮುಖ್ಯಸ್ಥರಾದ ಮಹಾಂತ್ ನರೇಂದ್ರ ಗಿರಿ ಘೋಷಿಸಿದ್ದಾರೆ.
ಕುಂಭ ಮೇಳ ಮುಗಿದ ಕೂಡಲೇ ಅಯೋಧ್ಯೆಗೆ ಹೋಗಿ, ಮಂದಿರ ನಿರ್ಮಾಣ ಆರಂಭಿಸಲು ಸಾಧುಗಳೆಲ್ಲ ನಿರ್ಧರಿಸಿದ್ದೇವೆ. ಸುಮಾರು ಒಂದು ತಿಂಗಳ ಕಾಲ ಸಾಧುಗಳು ಅಲ್ಲಿಯೇ ಇದ್ದು ಮಂದಿರ ನಿರ್ಮಾಣ ಕಾರ್ಯ ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ ಮಹಾಂತ ಗಿರಿ, ಸರಕಾರ ಚುನಾವಣೆಯಲ್ಲಿ ಲಾಭ ಪಡೆಯುವುದಕ್ಕಾಗಿ ಉದ್ದೇಶಪೂರ್ವಕವಾಗಿಯೇ ರಾಮ ಮಂದಿರ ವಿಚಾರವನ್ನು ಜೀವಂತವಾಗಿರಿಸಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಗೆ ಮಂದಿರ ನಿರ್ಮಾಣದ ಬಗ್ಗೆ ಆಸಕ್ತಿಯಿಲ್ಲ. ಚುನಾವಣೆಗಾಗಿ ಈ ವಿಷಯ ಕುರಿತು ಹೇಳಿಕೆ ನೀಡಿತ್ತದೆ ಅಷ್ಟೇ ಅಂದಿದ್ದಾರೆ.
Will meet in Ayodhya after Kumbh Mela for construction of Ram temple