ಫೆ.3ರಂದು ವೀರಶೈವ ಸಹಕಾರಿ ಬ್ಯಾಂಕಿನ ಚುನಾವಣೆ

ಬೆಂಗಳೂರು,ಜ.20-ವಿಜಯನಗರದಲ್ಲಿರುವ ವೀರಶೈವ ಸಹಕಾರಿ ಬ್ಯಾಂಕ್‍ಗೆ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರುಗಳ ಆಯ್ಕೆಗೆ ಫೆ.3ರಂದು ಚುನಾವಣೆ ನಡೆಯಲಿದೆ.

ವಿಜಯನಗರ ಮನುವನ ಸಮೀಪ ಇರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಫೆ.3ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಜ.26 ಕೊನೆಯ ದಿನವಾಗಿದೆ.

ಚುನಾವಣೆ ವೇಳಾಪಟ್ಟಿಯನ್ನು ಬ್ಯಾಂಕ್‍ನ ಎಲ್ಲ ಶಾಖೆಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಅರ್ಹ ಮತದಾರರು ಗುರುತಿನ ಚೀಟಿಯೊಂದಿಗೆ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಬ್ಯಾಂಕ್‍ನ ರಿಟರ್ನಿಂಗ್ ಅಧಿಕಾರಿ ಅಶ್ವಥ್ ನಾರಾಯಣ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ