ನೀರವ್ ಮೋದಿ ಪ್ರಕರಣ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಇಬ್ಬರು ಹಿರಿಯ ಅಧಿಕಾರಿಗಳು ವಜಾ

ಮುಂಬೈ,ಜ.20- ನೀರವ್ ಮೋದಿ 14 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಇಬ್ಬರು ಕಾರ್ಯನಿರ್ವಾಹಕ ನಿರ್ದೇಶಕರನ್ನುಕೇಂದ್ರ ಸರ್ಕಾರ ಸೇವೆಯಿಂದ ವಜಾ ಮಾಡಿದೆ.

ಬ್ಯಾಂಕ್ ಹಿರಿಯ ಅಧಿಕಾರಿಗಳಾದ ಕೆ.ವೀರ ಬ್ರಹ್ಮಾಜಿರಾವ್ ಹಾಗೂ ಸಂಜೀವ್ ಶರಣ್ ವಜಾಗೊಂಡಿರುವವರು.

ಇವರಿಬ್ಬರು ಶೀಘ್ರದಲ್ಲಿಯೇ ನಿವೃತ್ತಿಯಾಗಲಿದ್ದರು. ಈ ಇಬ್ಬರಿಗೂ ಶೋಕಾಸ್ ನೋಟಿಸ್ ನೀಡಿರುವ ಕೇಂದ್ರ, ಹಗರಣದ ಸಂದರ್ಭದಲ್ಲಿಕಾರ್ಯಾ ನಿರ್ವಹಕ ನಿರ್ದೇಶಕರಾಗಿದ್ದ ನೀವು ಬ್ಯಾಂಕ್‍ನ ಕಾರ್ಯದ ಬಗ್ಗೆ ನಿಯಂತ್ರಣ ಸಾಧಿಸದ ಕಾರಣ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ