ವ್ಯಕ್ತಿಯನ್ನು ಅಡ್ಡಗಟ್ಟಿ ಮೊಬೈಲ್ ಮತ್ತು ನಗದು ದೋಚಿದ ಕಳ್ಳರು

ಬೆಂಗಳೂರು,ಜ.20-ಬೈಕ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬೆದರಿಸಿದ ಇಬ್ಬರು ದರೋಡೆಕೋರರು, ಆತನಿಂದ ಎರಡು ಸಾವಿರ ನಗದು ಹಾಗೂ ಮೊಬೈಲ್ ದೋಚಿರುವ ಘಟನೆ ಡಿ.ಜೆ.ಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೋದಿ ಗಾರ್ಡನ್ ವಾಸಿ ಸಫಿಕ್ ಅಹಮ್ಮದ್ ದರೋಡೆಗೊಳಗಾದ ವ್ಯಕ್ತಿ.

ನಿನ್ನೆ ರಾತ್ರಿ11.30ರಲ್ಲಿ ಸಫಿಕ್ ಅಹಮ್ಮದ್ ಮೋದಿ ಗಾರ್ಡನ್ ಇಂದಿರಾ ಕ್ಯಾಂಟೀನ್ ಬಳಿ ಬೈಕ್‍ನಲ್ಲಿ ಹೋಗುತ್ತಿದ್ದರು.ಈ ವೇಳೆ ಎದುರಿನಿಂದ ಬಂದ ಇಬ್ಬರು ಆತನನ್ನು ಅಡ್ಡ ಹಾಕಿ ಬೆದರಿಸಿ ಅವರ ಬಳಿಯಿದ್ದ ಎರಡು ಸಾವಿರ ನಗದು ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಡಿ.ಜೆ.ಹಳ್ಳಿ ಠಾಣೆ ಪೋಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ