ದಕ್ಷಣ ಧ್ರುವ ದಂಡ ಯಾತ್ರೆಯನ್ನು ಮುಗಿಸಿದ ಮಹಿಳಾ ಐಪಿಎಸ್ ಅಧಿಕಾರಿ

ನವದೆಹಲಿ,ಜ.20- ಮಹಿಳಾ ಐಪಿ ಎಸ್‍ ಅಧಿಕಾರಿ ಯೊಬ್ಬರು ದಕ್ಷಿಣ ಧ್ರುವ ದಂಡ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ಇಂಡೋ-ಟಿಬೇಟಿಯನ್ ಬಾರ್ಡರ್ ಪೋಲೀಸ್(ಐವೈಬಿಪಿ)ಯಡಿಐಜಿ ಯಾಗಿರುವ ಐಪಿಎಸ್‍ ಅಧಿಕಾರಿ ಅಪರ್ಣಾಕುಮಾರ್‍ ದಕ್ಷಿಣ ಧ್ರುವದ ತುದಿಯನ್ನು ಯಶಶ್ವಿಯಾಗಿ ತಲುಪಿದ್ದಾರೆ.

2002ರ ಉತ್ತರ ಪ್ರದೇಶ ಕೆಡರ್‍ ಐಪಿಎಸ್‍ ಅಧಿಕಾರಿಯಾಗಿರುವ ಅಪರ್ಣಾ ಸದ್ಯ ಐವೈಬಿಪಿ ಡೆಹ್ರಾಡೂನ್‍ನ ಉತ್ತರ ಫ್ರಾಂಟಿಯರ್ ಹೆಡ್‍ಕ್ವಾರ್ಟರ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ದಕ್ಷಿಣ ಧ್ರುವದ ತುದಿ ತಲುಪಲು ಅಪರ್ಣಾ ಬರೋಬ್ಬರಿ 111 ಕಿ.ಮೀ. ಹಿಮದಲ್ಲಿ ನಡೆದಿದ್ದಾರೆ. ಅಲ್ಲದೇ ಈ ವೇಳೆ ಅಪರ್ಣಾ ಬರೋಬ್ಬರಿ 35 ಕೆಜಿ ಭಾರದ ಸಾಮಾನು ಸರಂಜಾಮನ್ನು ಹೊತ್ತು ಸಾಗಿದ್ದಾರೆ.

ಅಪರ್ಣಾದಕ್ಷಿಣಧ್ರುವತಲುಪಿದ್ದು, ಕೇಂದ್ರ ಗೃಹ ಸಚಿವರಾಜನಾಥ್ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಅಪರ್ಣಾ ಅವರಿಗೆ ಶುಭಾಶಯಕೋರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ