ಶ್ರೀನಗರ, ಜ.20- ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಲೋಕಸಭೆ ಹಾಗೂ ಆಸೆಂಬ್ಲಿ ಚುನಾವಣೆಯನ್ನು ಎದುರಿಸಲು ಬಿಜೆಪಿ ಸಿದ್ಧವಿರುವುದಾಗಿ ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ.
ರಾಂಬನ್ ಜಿಲ್ಲೆಯಲ್ಲಿಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿತೇಂದ್ರ ಸಿಂಗ್, ಅಸೆಂಬ್ಲಿ ಹಾಗೂ ಲೋಕಸಭೆ ಚುನಾವಣೆ ಒಟ್ಟಿಗೆ ನಡೆದರೂ ಬಿಜೆಪಿ ಸಿದ್ಧವಿದೆ ಎಂದರು.
ಚುನಾವಣಾಆಯೋಗ ಪರಿಶೀಲನೆ ನಂತರಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.ಇಂದೇಚುನಾವಣೆ ನಡೆದರೂ ಬಿಜೆಪಿ ಸಿದ್ಧವಿರುವುದಾಗಿ ಜಿತೇಂದ್ರ ಸಿಂಗ್ ಹೇಳಿದರು.
ಪ್ರಸ್ತುತಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ.ಹಿಂದೆ ಆಡಳಿತ ನಡೆಸಿರುವ ಸರ್ಕಾರಗಳು ಕಣಿವೆ ಜಿಲ್ಲೆಯನ್ನು ನಿರ್ಲಕ್ಷಿಸಿವೆ ಎಂದು ಪ್ರಧಾನ ಮಂತ್ರಿಕಾರ್ಯಾಲಯದ ರಾಜ್ಯ ಸಚಿವರು ಆಗಿರುವ ಜಿತೇಂದ್ರ ಸಿಂಗ್ ಆರೋಪಿಸಿದ್ದು, ಜಮ್ಮು- ಕಾಶ್ಮೀರದ ಅಭಿವೃದ್ಧಿ ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದರು.
ಚೆನಾಬ್ ನದಿ ಮೇಲೆ ಸೇತುವೆ ಕಾಮಗಾರಿ ಅನುಮೋದನೆಗೊಂಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದು ಜಿತೇಂದ್ರ ಸಿಂಗ್ ತಿಳಿಸಿದರು.