ಬೆಂಗಳೂರು,ಜ.19-ಅತಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಪೆÇಲೀಸ್ ಆಯುಕ್ತ ಸುನೀಲ್ಕುಮಾರ್ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಗಂಗಾವತಿ ವಿರಚಿತ ದೇಶದ ಚಿತ್ತ ಯುವಜನರತ್ತ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಇಲ್ಲದೆ ಜೀವನವಿಲ್ಲ ಎಂಬಂತಾಗಿದೆ ಎಂದರು.
ಹಿಂದೆ ಸಮಾಜದಲ್ಲಿ ಎಲ್ಲಾ ಆಗುಹೋಗುಗಳ ಬಗ್ಗೆ ವೃತ್ತ ಪತ್ರಿಕೆಗಳನ್ನು ಓದಿ ತಿಳಿದುಕೊಳ್ಳುತ್ತಿದ್ದರು. ಆದರೆ ಇಂದು ಎಲ್ಲದಕ್ಕೂ ಮೊಬೈಲ್, ಸಾಮಾಜಿಕ ಜಾಲತಾಣಗಳ ಮೊರೆ ಹೋಗುವಂತಾಗಿದೆ. ಇದರಿಂದಾಗಿ ಪತ್ರಿಕೆಗಳನ್ನು ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಕಷ್ಟ ಪಟ್ಟು ಓದಿದ ವಿದ್ಯೆ ಶಾಶ್ವತವಾಗಿರುತ್ತದೆ.ಇದು ನಿರಂತರವಾಗಿ ನಮ್ಮ ಮನಸ್ಸಿನಲ್ಲಿರುತ್ತದೆ. ವಿದ್ಯೆ ಎಂಬ ಸಂಪತ್ತಿನ ಮುಂದೆ ಯಾವುದೂ ಶಾಶ್ವತವಲ್ಲ ಎಂದರು.
ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವುದು ಯುವಜನತೆಯಿಂದ ಮಾತ್ರ ಸಾಧ್ಯವಿದೆ ಎಂದ ಅವರು, ಇತ್ತೀಚೆಗೆ ಕ್ಯಾಲ್ಕುಲೇಟರ್ ಮುಂದೆ ಮಗ್ಗಿಗಳು ಮರೆತು ಹೋಗಿವೆ. ಲೆಕ್ಕ ಎಂದ ತಕ್ಷಣ ಎಲ್ಲರ ಕೈಯಲ್ಲೂ ಕ್ಯಾಲ್ಕುಲೇಟರ್ ಬರುತ್ತದೆ. ತಂತ್ರಜ್ಞಾನದ ಜೊತೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡರೆ ಸುಪ್ತವಾಗಿ ಅಡಗಿರುವ ಜ್ಞಾನ ವೃದ್ಧಿಯಾಗಿ ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಮಾತನಾಡಿ, ಮಕ್ಕಳ ಬಗ್ಗೆ ಹಗುರವಾದ ಮಾತುಗಳನ್ನಾಡದೆ ಅವರಲ್ಲಿ ಮೌಲ್ಯಗಳನ್ನು ತುಂಬಿದರೆ ಅವರೇ ಶ್ರೀಮಂತರಾಗುತ್ತಾರೆ ಎಂದು ಸಲಹೆ ನೀಡಿದರು.
ಭ್ರಷ್ಟ ರಾಜಕಾರಣಿಗಳು ಅಮಾಯಕರಿಗೆ ಆಮಿಷಗಳನ್ನು ಒಡ್ಡಿ ಮತಗಳನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಕೆಲ ರಾಜಕಾರಣಿಗಳು ಒಳ್ಳೆಯವರೂ ಇದ್ದಾರೆ.ಆದರೆ ಅವರ ಮಾತು ನಡೆಯುವುದಿಲ್ಲ ಎಂದರು.
ಮುಂಬರುವ ಲೋಕಸಭೆ, ರಾಜ್ಯಸಭೆ, ಪಂಚಾಯತ್ ಚುನಾವಣೆಗಳು ಸಾಮಥ್ರ್ಯವಿರುವ ಪ್ರಾಮಾಣಿಕ ವ್ಯಕ್ತಿಗೆ ಮತ ನೀಡಿ ಆರಿಸಿ ತರಬೇಕು ಎಂದು ಕಿವಿಮಾತು ಹೇಳಿದ ಅವರು, ಪತ್ರಕರ್ತರು ಮನಸ್ಸು ಮಾಡಿದರೆ ಬದಲಾವಣೆ ಸಾಧ್ಯವಿದೆ ಎಂದು ಹೇಳಿದರು.
ಪ್ರೆಸ್ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಹಿರಿಯ ಪತ್ರಕರ್ತ ವೆಂಕಟನಾರಾಯಣ್, ಗಂಡಸಿ ಸದಾನಂದಸ್ವಾಮಿ, ಪತ್ರಕರ್ತೆ ರಾಧಿಕಾ ಪುರಂದರ್ ಉಪಸ್ಥಿತರಿದ್ದರು.