ಮಸೀದಿ ಕಾಮಗಾರಿ ಪರಿಶೀಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಕಡೂರು, ಜ.19- ಪಟ್ಟಣದ ರೈಲ್ವೆ ಸ್ಟೇಷನ್‍ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಲಬಾಬಿನ್ ಮಸೀದಿಯ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿದರು. ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಆನಂದ್‍ ಜತೆ ಬಂದು ಮಸೀದಿ ಕಾಮಗಾರಿ ಪರಿಶೀಲಿಸಿದರು.

ಮುಸ್ಲಿಂ ಮುಖಂಡರೊಂದಿಗೆ ಮಾತನಾಡಿ, ಮಸೀದಿಯ ಕಾಮಗಾರಿಗೆ ಹಣ ಅವಶ್ಯಕತೆ ಏನಾದರೂ ಬೇಕಾಗಿದೆಯೆ ಎಂದು ಪ್ರಶ್ನಿಸಿ, ಕಾಮಗಾರಿ ಮುಗಿದ ನಂತರ ಮುಖ್ಯಮಂತ್ರಿಗಳು, ವಕ್ರ್ಸ್ ಸಚಿವ ಜಮೀರ್‍ಅಹ್ಮದ್, ರೋಷನ್ ಬೇಗ್ ಮುಂತಾದವರೊಂದಿಗೆ ಆಗಮಿಸಿ ಉದ್ಘಾಟನೆ ನೆರವೇರಿಸೋಣ ಎಂದರು.

ಲಬಾಬಿನ್ ಮಸೀದಿ ಸಮಿತಿಯ ಕಾರ್ಯದರ್ಶಿ ಸಾದತ್ ಹುಸೇನ್, ಸಿದ್ದರಾಮಯ್ಯನವರಿಗೆ ಮನವಿ ನೀಡಿದ ನಂತರ ಸುಮಾರು 5 ಕೋಟಿರೂ. ವೆಚ್ಚದಲ್ಲಿ ನೂತನ ಮಸೀದಿ ನಿರ್ಮಾಣವಾಗುತ್ತಿದೆ. ನಮಗೆ ಸರ್ಕಾರದ ಯಾವುದೇ ಅನುದಾನ ಬೇಡವಾಗಿದ್ದು, ಜನತೆ ನೀಡಿರುವ ವಂತಿಗೆಯಲ್ಲೇಕಾಮಗಾರಿ ಮುಕ್ತಾಯ ಗೊಳಿಸಲಾಗುವುದು ಎಂದು ತಿಳಿಸಿದರು.

ಖಾಲಿ ಇರುವ ಲಾಬ್ ಬಿನ್ ಮಸೀದಿಯ ಅಡಾಖ್ ಸಮಿತಿಗೆ ಕೇವಲ 11 ತಿಂಗಳ ಅವಧಿಇದ್ದುಇದೇ ಸಮಿತಿಯನ್ನುಇನ್ನುಒಂದು ವರ್ಷಗಳ ಮುಂದುವರಿಸಿದರೆ ಮಸೀದಿಯ ಕಾಮಗಾರಿ ಮುಗಿಸಿ ಉದ್ಘಾಟನೆಯನ್ನು ನೆರವೇರಿಸಿ ನಂತರ ಬರುವ ಸಮಿತಿಯವರಿಗೆ ಸಹಕರಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದರು.

ಸಿದ್ದರಾಮಯ್ಯನವರು ಮುಖಂಡರುಗಳಿಗೆ ಉತ್ತರಿಸಿ ಮಾತನಾಡಿ, ಸಂಬಂಧಪಟ್ಟ ವಕ್ರ್ಸ್ ಸಚಿವರೊಂದಿಗೆ ಇದರ ಬಗ್ಗೆ ಮಾತುಕತೆ ನಡೆಸಿ ಹಾಲಿ ಇರುವ ಸಮಿತಿಯನ್ನು ಮುಂದುವರೆಸಿಕೊಂಡು ಹೋಗಲು ಸಚಿವರಲ್ಲಿ ಚರ್ಚಿಸಿ ಮುಂದುವರಿಸಲು ಅವಕಾಶ ಕಲ್ಪಿಸಿಕೊಡುವ ಭರವಸೆ ನೀಡಿದರು.

ಜಿಪಂ ಮಾಜಿಅಧ್ಯಕ್ಷ ಕೆ.ಎಂ. ಕೆಂಪರಾಜ್, ಲಾಬಾಬಿನ್ ಮಸೀದಿ ಸುನತ್‍ಜಮಾ ಅಧ್ಯಕ್ಷ ಮೆಹಬೂಬ್‍ಖಾನ್, ಪುರಸಭಾ ಸದಸ್ಯಎನ್. ಬಷೀರ್‍ಸಾಬ್, ಸಮಿತಿ ಸದಸ್ಯರಾದ ಶರೀಫ್, ಅತಾಹುಲ್ಲಾ, ಫಯಾಜ್, ಮೊಹಿದ್ದಿನ್, ಜಾಕೀರ್, ಇಮ್ರಾನ್, ತೌಫಿಕ್, ಯಾಸೀನ್, ಜೀಶನ್, ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ