ಪೆ.2ರಂದು ಸ್ರದೇಶಿ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

ಬೆಂಗಳೂರು,ಜ.18- ಸ್ವದೇಶಿ ಸಂಘದ ವತಿಯಿಂದ ರಾಷ್ಟ್ರೀಯ ಯುವ ದಿನ ಮತ್ತು 156ನೇ ಸ್ವಾಮಿ ವಿವೇಕನಂದರ ಜನ್ಮ ದಿನಾಚರಣೆ ಅಂಗವಾಗಿ ಬೃಹತ್ ಮೆರವಣಿಗೆಯನ್ನು ಫೆ.2ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕರ್ತರ ಸಮಿತಿ ಅಧ್ಯಕ್ಷ ಸ್ವಾಮಿ ತತ್ಪರೂಪನಂದ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಸ್ವಾಮಿ ವಿವೇಕಾನಂದರ ತತ್ವಗಳನ್ನು ಮತ್ತು ಚಿಂತನೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

2ರಂದು ಬೆಳಗ್ಗೆ 9 ಗಂಟೆಗೆ ಎಚ್‍ಎಸ್‍ಆರ್ ಬಡಾವಣೆಯ ಗಣೇಶ್ ಪಾರ್ಕ್‍ನಿಂದ ಮೆರವಣಿಗೆ ಹೊರಡಲಿದೆ. ಅಗರ ಮೂಲಕವಾಗಿ 24ನೇ ಮುಖ್ಯರಸ್ತೆಯಲ್ಲಿ ತೆರಳಿ 19ನೇ ಕ್ರಾಸ್‍ನಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದೊಡ್ಡ ಮೈದಾನಕ್ಕೆ ತಲುಪಲ್ಲಿದ್ದು ತದನಂತರ ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ 4 ಸಾವಿರದಿಂದ ಐದು ಸಾವಿರ ಮಕ್ಕಳು ಇತರೆ ಸಂಘಸಂಸ್ಥೆಗಳ ಸದಸ್ಯರು ಮತ್ತು ನಾಗರಿಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ