ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿಗಳು

ಬೆಂಗಳೂರು,ಜ.19- ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.
ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಕ್ಕೆ ಪುಷ್ಪನಮನ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು ಶ್ವೇತವರ್ಣದ ಪಾರಿವಾಳ ಹಾರಿಬಿಡುವ ಮೂಲಕ 209ನೇ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು.

ರಾಜ್‍ಘಾಟ್, ದಂಡಿಯಾತ್ರೆ, ಬಾಬು ಕುಟೀರ, ಸಬರಮತಿ ಆಶ್ರಮಗಳು ಪ್ರಮುಖ ಆಕರ್ಷಣೆಯಾಗಿವೆ.
ಬೆಳಗಿನಿಂದಲೇ ಸಸ್ಯಕಾಶಿಗೆ ಸಾಗರೋಪಾದಿಯಲ್ಲಿ ಜನರು ಮಕ್ಕಳೊಂದಿಗೆ ಆಗಮಿಸಿ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡರು.
6 ಅಡಿ ಎತ್ತರದ ಪೀಠದಲ್ಲಿ ಸಿದ್ಧಗೊಂಡಿರುವ 6*5 ಅಗಲದ ಗಾಂಧೀ ಪ್ರತಿಮೆ, 35*20 ಅಗಲ 16 ಅಡಿ ಎತ್ತರದ ಸಬರಮತಿ ಆಶ್ರಮಕ್ಕೆ ವಿವಿಧ ಪುಷ್ಪಗಳನ್ನು ಬಳಲಾಗಿದೆ. 2.4 ಲಕ್ಷ ಕೆಂಪು ಗುಲಾಬಿ, 3.2 ಲಕ್ಷ ಶ್ವೇತ ವರ್ಣದ ಸೇವಂತಿ ಹೂಗಳು, 80 ಸಾವಿರ ಕಿತ್ತಲೆಬಣ್ಣದ ಗುಲಾಬಿ ಹೂ ಸೇರಿದಂತೆ 6 ಲಕ್ಷ ಹೂಗಳನ್ನು ಬಳಸಿರುವುದು ವಿಶೇಷ.

ಇಂದಿನಿಂದ ಆರಂಭವಾಗಿರುವ ಫಲಪುಷ್ಪ ಪ್ರದರ್ಶನ 27ರವರೆಗೆ ನಡೆಯಲಿದೆ. ಪ್ರಮುಖವಾಗಿ ಧ್ಯಾನಸ್ಥ ಗಾಂಧೀಜಿ, ಗಾಂಧಿ ಚರಕ, ಗಾಂಧಿ ಕನ್ನಡಕದ ಪ್ರತಿರೂಪ, ಬಾಬು ಕುಟೀರ, ಗಾಂಧಿ ಅಂಚೆ ಚೀಟಿ ಪ್ರದರ್ಶನ, ಚೆಂಡುಗಳಲ್ಲಿ ಅಮೂರ್ತ ಗಾಂಧಿ, ಮೆಗಾ ಫೆÇ್ರೀ ಫ್ಲ್ಯೂ, ಗಾಂಧಿ ತತ್ವ ಆಧಾರಿತ ಮೂರು ಮಂಗಗಳು, ಸಬರಮತಿ ಆಶ್ರಮ, ದಂಡಿ ಸತ್ಯಾಗ್ರಹ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ