ಎಲ್ಲಾ ಜಿಲ್ಲೆಗಳಲ್ಲೂ ಎಲೆಕ್ಟ್ರಾನಿಕ್ ಲಸಿಕಾ ಸಾಗಾಣಿಕೆ ಪದ್ಧತಿ ಅಳವಡಿಕೆ

Varta Mitra News

ಬೆಂಗಳೂರು,ಜ.18-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಲಸಿಕಾ ಕಾರ್ಯಕ್ರಮ ಸುಧಾರಣೆಗಾಗಿ ಎಲೆಕ್ಟ್ರಾನಿಕ್ ಲಸಿಕಾ ಸಾಗಾಣಿಕೆ ಪದ್ಧತಿ ಅಳವಡಿಕೆ ಮಾಡಲಾಗುತ್ತಿದೆ.

ಎಲೆಕ್ಟ್ರಾನಿಕ್ ಲಸಿಕಾ ಸುದ್ದಿ ಸಂಪರ್ಕ- ಇವಿಐಎನ್- ಒಂದು ನೂತನ ತಾಂತ್ರಿಕ ಪರಿಹಾರವಾಗಿದ್ದು, ಭಾರತದಲ್ಲಿ ಲಸಿಕಾ ಸರಬರಾಜು ಸರಪಣಿ ಪದ್ಧತಿಯನ್ನು ಬಲಪಡಿಸುವ ಗುರಿ ಹೊಂದಿದೆ. ಇದನ್ನು ಯುನೈಟೆಡ್ ನೇಷನ್ಸ್ ಡೆವಲಪ್‍ಮೆಂಟ್ ಪೆÇ್ರಗ್ರಾಮ್ ಸಹಾಯದಿಂದ ಭಾರತ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಾರಿಗೊಳಿಸಿದೆ.

2015ರ ಅಕ್ಟೋಬರ್‍ನಲ್ಲಿ ಪ್ರಾರಂಭವಾಗಿರುವ ಇವಿಐಎನ್ ದೇಶದ 12 ರಾಜ್ಯಗಳಲ್ಲಿ ಜಾರಿಗೊಂಡಿದ್ದು, ಮೊಬೈಲ್ ಮತ್ತು ಅಂತರ್ಜಾಲ ಬಳಕೆ ಸುಮಾರು 10,500 ಶೀತಲ ಸರಪಣಿ ಸ್ಥಳಗಳಿಗೆ ಲಸಿಕಾ ಸಾಗಾಣಿಕೆಯನ್ನು ಸಮರ್ಥವಾಗಿ ನಿರ್ವಹಿಸಲಾಗಿದೆ.
ಬಿಬಿಎಂಪಿಯು ಒಳಗೊಂಡಂತೆ ರಾಜ್ಯದ 31 ಜಿಲ್ಲೆಗಳಲ್ಲಿ 2915 ಶೀತಲ ಸರಪಣಿ ಸ್ಥಳಗಳಲ್ಲಿ ಲಸಿಕೆ ಸರಬರಾಜು ದಾಸ್ತಾನು ಮತ್ತು ಶೇಖರಿತ ತಾಪಮಾನವನ್ನು ಇವಿಐಎನ್ ಮೂಲಕ ಡಿಜಿಟೈಸ್‍ಗೊಳಿಸಲಾಗಿದೆ. ಶೀತಲ ಸರಪಣಿ ವ್ಯವಸ್ಥೆಗೆ ಸಂಬಂಧಿಸಿದ ಸಿಬ್ಬಂದಿ ಲಸಿಕೆ ಉಗ್ರಾಣ ನಿರ್ವಾಹಕರು ಮತ್ತು ಶೀತಲ ಸರಪಣಿ ತಯಾರಕರು ಸೇರಿದಂತೆ ಎಲ್ಲರಿಗೂ ಮೊಬೈಲ್ ಹಾಗೂ ಅಂತರ್ಜಾಲ ಆಧಾರಿತ ಇವಿಐಎನ್ ಅಳವಡಿಕೆ ಬಗ್ಗೆ ತರಬೇತಿ ನೀಡಲಾಗುವುದು.

ನಿಖರವಾದ ತಾಪಮಾನ ಪರಿಶೀಲನೆಗಾಗಿ ತಾಪಮಾನ ಲಾಗರ್ಸ್‍ಗಳನ್ನು ರಾಜ್ಯದ ಎಲ್ಲ ಶೀತಲ ಸರಪಣಿ ಉಪಕರಣಗಳಲ್ಲಿ ಅಳವಡಿಸಲಾಗುವುದು ಎಂದು ಬಿಬಿಎಂ ಮುಖ್ಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಇವಿಐಎನ್ ಕಾರ್ಯ:
ಇವಿಐಎನ್ ತಾಂತ್ರಿಕತೆ ಹೊಂದಿದ ಸ್ಮಾರ್ಟ್ ಫೆÇೀನ್‍ಗಳನ್ನು ಶೀತಲ ಸರಪಣಿ ಸಹಾಯಕರಿಗೆ ಒದಗಿಸಿ ದಾಸ್ತಾನುಪಟ್ಟಿ ಮಾಡಬಹುದಾಗಿದೆ. ಪ್ರತಿಯೊಬ್ಬ ಶೀತಲ ಸರಪಣಿ ಸಹಾಯಕ ಪ್ರತಿದಿನ ಉಪಯೋಗಿಸಿದ ಲಸಿಕೆಯ ವಿವರಗಳನ್ನು ಪ್ರಾಮಾಣಿತ ನೋಂದಣಿ ಪುಸ್ತಕಗಳಲ್ಲಿ ಲಸಿಕಾ ದಿನದ ಕೊನೆಯಲ್ಲಿ ದಾಖಲಿಸುತ್ತಾನೆ. ಇದು ಏಕಕಾಲದಲ್ಲಿ ಇವಿಐಎನ್‍ನಲ್ಲಿ ನವೀಕರಣಗೊಂಡು ಕ್ಲೌಡ್ ಸರ್ವರ್‍ನಲ್ಲಿ ದಾಖಲಾಗುವುದರಿಂದ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಕಾರ್ಯಕ್ರಮ ವ್ಯವಸ್ಥಾಪಕರು ಇದನ್ನು ಅಂತರ್ಜಾಲದ ಮೂಲಕ ಪರಿಶೀಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಡಾ.ಮನೀಶ್ ಪಂತ್ ಮೊ: 9953060 859, ಡಾ.ಸುಗಂಧ ನಾಗರ್ ಮೊ: 9910429976 ಅಥವಾ ಡಿಡಿಡಿ.ಜ್ಞಿ.್ಠ್ಞbm.ಟ್ಟ/ಛಿqಜ್ಞಿ ಸಂಪರ್ಕಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ