ಬೆಂಗಳೂರು,ಜ.18- ಬಲ ಭಾಗದ ಸೊಂಟ ಮುರಿದುಕೊಂಡು ಓಡಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ 98 ವರ್ಷದ ವೃದ್ದೆಯೊಬ್ಬರಿಗೆ ಅಪೆÇೀಲೋ ಆಸ್ಪತ್ರೆ ವೈದ್ಯರೊಬ್ಬರು ಸೊಂಟ ಬದಲಿ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ನಿವಾಸಿ ಲಕ್ಷ್ಮಮ್ಮ ಅವರು ಕಳೆದ ಮಾರ್ಚ್‍ನಲ್ಲಿ ಬಿದ್ದು ಸೊಂಟ ಮುರಿದುಕೊಂಡಿದ್ದರು. ಮೂಳೆ ಹೃದಯದ ಸ್ಥಿತಿಗಳು ಶಸ್ತ್ರಚಿಕಿತ್ಸೆಗೆ ತೊಡಕಾಗಿದ್ದವು. ಇದನ್ನೇ ಸವಾಲಾಗಿ ಸ್ವೀಕರಿಸಿದ ಅಪೆÇೀಲೋ ಆಸ್ಪತ್ರೆಯ ವೈದ್ಯರು ಕುಟುಂಬದ ಸದಸ್ಯರ ಒಪ್ಪಿಗೆ ಪಡೆದು ವೃದ್ಧೆಯ ಚಿಕಿತ್ಸೆಗೆ ಮುಂದಾದರು.
ಚಿಕಿತ್ಸೆ ಪಡೆದ 24 ಗಂಟೆಯಲ್ಲಿ ಲಕ್ಷ್ಮಮ್ಮ ಸಹಾಯಕರ ನೆರವಿನಿಂದ ನಂತರ ಓಡಲಾರಂಭಿಸಿದರು. ಅಂದಿನಿಂದ ಇಲ್ಲಿಯವರೆಗೂ ಸಮಸ್ಯೆ ಕಂಡು ಬಂದಿಲ್ಲ. ಪ್ರಸ್ತುತ ಎಂದಿನಂತೆ ಎಲ್ಲರಂತೆ ಲಕ್ಷ್ಮಮ್ಮ ನಡೆದಾಡುತ್ತಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯ ಡಾ.ವಸುದೇವ ಪ್ರಭು ಹೇಳುತ್ತಾರೆ.
ಮಲಮೂತ್ರ ವಿಸರ್ಜನೆಗೂ ತೊಂದರೆ ಪಡಬೇಕಾಗಿತ್ತು. ಆಪರೇಷನ್ ಆದ ನಂತರ ಯಾರ ಸಹಾಯವೂ ಇಲ್ಲದೆ ಸ್ಟಿಕ್ ಮೂಲಕ ಓಡಾಡುತ್ತಿರುವೆ. ಎಡ ಸೊಂಟದ ಬದಲಿ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿರುವ ಅಪೆÇೀಲೋ ಆಸ್ಪತ್ರೆಯ ಡಾ. ವಾಸುದೇವ ಪ್ರಭು ಮತ್ತು ಅವರ ತಂಡಕ್ಕೆ ನಮ್ಮ ಕುಟುಂಬ ಚಿರರುಣಿಯಾಗಿರುತ್ತದೆ ಎಂದು ಹೇಳಿದ್ದಾರೆ.