ಜಮ್ಮು-ಕಾಶ್ಮೀರದ ಲಡಾಕ್​ನಲ್ಲಿ ಹಿಮಪಾತಕ್ಕೆ ಮೂವರು ಬಲಿ, ಏಳು ಮಂದಿ ನಾಪತ್ತೆ

Varta Mitra News

ಲೆಹ್ (ಲಡಾಕ್): 17,500 ಅಡಿ ಜಗತ್ತಿನ ಅತ್ಯಂತ ಎತ್ತರದ ರಸ್ತೆಯ ಮೇಲೆ ಇಂದು ಬೆಳಗ್ಗೆ ಭಾರೀ ಹಿಮಪಾತಕ್ಕೆ ಹಲವು ವಾಹನಗಳು ಸಿಲುಕಿದ ಪರಿಣಾಮ ಮೂವರು ಮೃತಪಟ್ಟು, ಏಳು ಮಂದಿ ನಾಪತ್ತೆಯಾಗಿರುವ ಘಟನೆ ಜಮ್ಮು-ಕಾಶ್ಮೀರದ ಖರ್ದುಂಗ್​ ಲಾ ಪಾಸ್​ನಲ್ಲಿ ನಡೆದಿದೆ. ಕಾಣೆಯಾದವರ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಪತ್ತೆ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತ, ರಾಜ್ಯ ಪೊಲೀಸ್​ ಇಲಾಖೆ ಹಾಗೂ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ಪಡೆ ಪಾಲ್ಗೊಂಡಿದೆ. ಘಟನೆ ನಡೆದ ಸ್ಥಳ ಲೆಹ್​ನಿಂದ 40 ಕಿ.ಮೀ. ದೂರದಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ