ಒಕ್ಕೂಟ ಭಾರತ ಸಮಾವೇಶಕ್ಕೆ ಸಂಪೂರ್ಣ ಬೆಂಬಲ: ಮಮತಾ ಬ್ಯಾನರ್ಜಿಗೆ ರಾಹುಲ್ ಪತ್ರ

ನವದೆಹಲಿ: ಕೋಲ್ಕತಾದಲ್ಲಿ ನಾಳೆ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಸಿದ್ಧಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತು ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, ಒಕ್ಕೂಟ ಭಾರತ ಸಮಾವೇಶಕ್ಕೆ ತಮ್ಮ ಸಂಪೂರ್ಣ ಸಹಕಾರವಿರುವುದಾಗಿ ತಿಳಿಸಿದ್ದಾರೆ.

ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಬಿಜೆಪಿ ವಿರೋಧಿ ಪಕ್ಷಗಳು ಬೃಹತ್​ ಮಟ್ಟದಲ್ಲಿ ಒಂದಾಗಲಿವೆ. “ಎಲ್ಲ ವಿರೋಧ ಪಕ್ಷಗಳು ಒಂದಾಗಬೇಕಿದೆ ಎಂದು ರಾಹುಲ್​ ಗಾಂಧಿ ಕರೆ ನೀಡಿದ್ದಾರೆ.

ಮಮತಾ ದೀದಿಗೆ ನಾನು ನನ್ನ ಸಹಕಾರವನ್ನು ಮುಂದುವರೆಸುತ್ತೇನೆ. ಈ ಮೂಲಕ ನಮ್ಮ ಒಗ್ಗಟ್ಟಿನ ಬಲವನ್ನು ಮತ್ತು ಶಕ್ತಿಶಾಲಿ ಸಂದೇಶವನ್ನು ಸಾರಬೇಕಿದೆ ಎಂದು ರಾಹುಲ್ ಪತ್ರದಲ್ಲಿ ತಿಳಿಸಿದ್ದಾರೆ.

ಒಟ್ಟಾರೆ ವಿರೋಧ ಪಕ್ಷಗಳ ಒಕ್ಕೂಟ ನಿಜವಾದ ರಾಷ್ಟ್ರೀಯತೆಯನ್ನು ಎತ್ತಿಹಿಡಿಯಲಿದೆ. ಬಿಜೆಪಿ ಮತ್ತು ಮಿಸ್ಟರ್​ ಮೋದಿ ಅವರಿಂದ ಹಾಳಾಗಿರುವ ಸಾಮಾಜಿಕ ನ್ಯಾಯವನ್ನು ಪ್ರಜಾಪ್ರಭುತ್ವದ ಆಧಾರದ ಮೇಲೆ ಅಭಿವೃದ್ಧಿಗೊಳಿಸುವುದು ನಮ್ಮ ಆಶಯ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Rahul Gandhi wrote to Mamata Banerjee today in support of her “United India rally” in Kolkata on Saturday,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ