ಬೆಂಗಳೂರು: ವಿನಯ್ ಕುಮಾರ್ ಅವರ ಅಮೋಘ ಅಜೇಯ 83 ರನ್ಗಳ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ ರಾಜಸ್ತಾನ ವಿರುದ್ಧ ಅಲ್ಪ ಮೊತ್ತದ ಮುನ್ನಡೆ ಪಡೆಯಿತು.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದ ಎರಡನೇ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಕರ್ನಾಟಕ ರಾಜಸ್ತಾನ ದಾಳಿಗೆ ತತ್ತರಿಸಿ ಹೋಯ್ತು. ಒಂದನೇ ಕ್ರಮಾಂಕದಲ್ಲಿ ಬಂದ ಸಿದ್ದಾರ್ಥ್ ಮತ್ತು ವಿನಯ್ ಕುಮಾರ್ ಅರ್ಧ ಶತಕ ಗಳಿಸಿದ್ದು ಬಿಟ್ಟರೇ ಬೇರೆ ಎಲ್ಲ ಬ್ಯಾಟ್ಸ್ಮನ್ಗಳು ಬೇಗನೆ ಪೆವಿಲಿಯನ್ ದಾರಿ ಹಿಡಿದರು.
ನಿಶ್ಚೆಲ್ ಡಿ 6, ಕರುಣ್ ನಾಯರ್ 4, ಮನೀಶ್ ಪಾಂಡೆ 7, ಶ್ರೇಯಸ್ ಗೋಪಾಲ್ 25, ಬಿ.ಆರ್.ಶರತ್ 4, ಗೌತಮ್ ಕೆ. 19 ರನ್ ಗಳಿಸಿ ನಿರಾಸೆ ಮೂಡಿಸಿದರು.
ಕೊನೆಯ ವಿಕೆಟ್ಗೆ 97 ರನ್ಗಳ ಭರ್ಜರಿ ಜೊತೆಯಾಟ
166 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕೆ ನೆರವಾಗಿದ್ದು ವಿನಯ್ ಕುಮಾರ್ ಮತ್ತು ರೋನಿತ್ ಮೋರೆ. ಕೊನೆಯ ವಿಕೆಟ್ಗೆ ಈ ಜೋಡಿ 97 ರನ್ಗಳ ಜೊತೆಯಾಟ ಪಮದ್ಯದ ಗತಿಯನ್ನೆ ಬದಲಿಸಿತು. ವಿನಯ್ ಕುಮಾರ್ ಅಜೇಯ 83 ರನ್ ಗಳಿಸಿದರು. ರೋನಿತ್ ಮೋರೆ 10 ರನ್ ಗಳಿಸಿದರು. ಕರ್ನಾಟಕ 39 ರನ್ಗಳ ಮುನ್ನಡೆ ಪಡೆಯಿತು. ಚಹರ್ 5 ವಿಕೆಟ್ ಪಡೆದು ಮಿಂಚಿದ್ರು ದಿನದಾಟದ ಅಂತ್ಯದಲ್ಲಿಎರಡನೇ ಇನ್ನಿಂಗ್ಸ್ ಆರಂಭಿಸಿದ ರಾಜಸ್ಥಾನ ಯಾದುದೇ ವಿಕೆಟ್ ನಷ್ಟವಿಲ್ಲದೇ 11 ರನ್ ಗಳಿಸಿತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ರಾಜಸ್ಥಾನ ಯಾದುದೇ ವಿಕೆಟ್ ನಷ್ಟವಿಲ್ಲದೇ 11 ರನ್ ಗಳಿಸಿತು.ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 263 ರನ್ಗಳಿಗೆ ಆಲೌಟ್ ಆಯಿತು. ರಾಜಸ್ಥಾನ ಇನ್ನು 28ರನ್ಗಳ ಹಿನ್ನಡೆ ಅನುಭವಿಸಿದೆ.