
ಬೆಂಗಳೂರು, ಜ.17- ಕೀಳುಮಟ್ಟದ ರಾಜಕಾರಣ ಮಾಡಲು ಹೋಗಿ ಬಿಜೆಪಿಯವರು ಏಟು ತಿಂದಿದ್ದಾರೆ ಎಂದು ಎಐಸಿಸಿ ಉಸ್ತುವಾರಿ ವೇಣುಗೋಪಾಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಆಸೆ-ಆಮಿಷಗಳಿಗೆ ನಮ್ಮ ಯಾವ ಶಾಸಕರೂ ಬಲಿಯಾಗುವುದಿಲ್ಲ. ನಮ್ಮ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಐದು ವರ್ಷಗಳ ಅವಧಿ ಪೂರೈಸಲಿದೆ ಎಂದು ಹೇಳಿದರು.
ಬಿಜೆಪಿ ನಡೆ ಅಸಹ್ಯ ತರುವಂಥದ್ದು ಎಂದು ಟೀಕಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಚಿತವಾಗಿರುವ ಸರ್ಕಾರವನ್ನು ಕೆಡವಲು ನಿರಂತರ ಪ್ರಯತ್ನ ಮಾಡುತ್ತಿರುವ ಬಿಜೆಪಿಯ ನಡೆ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.