
ಬೆಂಗಳೂರು, ಜ.17- ಎಸ್ಜೆಬಿ ಸ್ಕೂಲ್ ವಾಸ್ತು ಶಿಲ್ಪಶಾಸ್ತ್ರ ಸಂಸ್ಥೆ ವತಿಯಿಂದ ಇದೇ 19 ರಿಂದ ಮೂರು ದಿನಗಳ ಕಾಲ 61 ನೇ ರಾಷ್ಟ್ರೀಯ ನಾಸಾ ಸಮಾವೇಶವನ್ನು ಕೆಂಗೇರಿಯ ಸಂಸ್ಥೆ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ನವದೆಹಲಿ ಆರ್ಕಿಟೆಕ್ಚರ್ ಕೌನ್ಸಿಲ್ ಅಧ್ಯಕ್ಷ ವಿಜಯ್ಗಾರ್ಗ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಅಂತಾರಾಷ್ಟ್ರೀಯ ತಜ್ಞರು ಮತ್ತು ವಾಸ್ತುಶಿಲ್ಪಿಗಳು ಹಾಗೂ ಉಪನ್ಯಾಸಕರು ಭಾಗವಹಿಸಲಿದ್ದಾರೆ.ಈಗಾಗಲೇ 3500 ಮಕ್ಕಳು ನೋಂದಣಿ ಮಾಡಿಕೊಂಡಿದ್ದು.ಅವರು ತಮ್ಮ ಪ್ರಾಜೆಕ್ಟ್ಗಳನ್ನು ಸಮಾವೇಶದಲ್ಲಿ ಪ್ರದರ್ಶಿಸಲಿದ್ದಾರೆ ಎಂದರು.