ಆಪರೇಷನ್ ಕಮಲ ವಿಫಲ: ಕಚೇರಿಯಲ್ಲಿ ಸಿಎಂ ಜನತಾ ದರ್ಶನ; ಕಾಂಗ್ರೆಸ್ ಕೆಲ ಶಾಸಕರ ನಡೆ ಇನ್ನೂ ನಿಗೂಢ!

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ರಾಜಕೀಯ ಚಟುವಟಿಕೆಗಳು ಹೆಚ್ಚು ಕಡಿಮೆ ಅಂತಿಮ ಹಂತಕ್ಕೆ ಬಂದು ತಲುಪಿದೆ, ಮಂಗಳವಾರ ಇಬ್ಬರು ಪಕ್ಷೇತರ ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡಿದ್ದಾರೆ.

ಕೆಲ ಕಾಂಗ್ರೆಸ್ ಶಾಸಕರು ಕೂಡ ಇದೇ ರೀತಿ ರಾಜಿನಾಮೆ ನೀಡಿ, ಬಿಜೆಪಿ ಕ್ಯಾಂಪ್ ಗೆ ಸೇರುತ್ತಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು, ಆದರೆ ಕಾಂಗ್ರೆಸ್ ತನ್ನ ಶಾಸಕರು ರಾಜಿನಾಮೆ ನೀಡದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ.

ಬಿಜೆಪಿ ತನ್ನ ಶಾಸಕರನ್ನು ಗುರುಗಾವ್ ನಲ್ಲಿಟ್ಟಿದೆ. ಆದರೆ ಕಾಂಗ್ರೆಸ್ ನ ಕೆಲ ಶಾಸಕರು ಇನ್ನೂ ಪಕ್ಷದ ವರಿಷ್ಠರ ಸಂಪರ್ಕಕ್ಕೆ ಸಿಗುತ್ತಿಲ್ಲ, ಬಿಜೆಪಿ ಶಾಸಕರನ್ನು ಸೆಳೆಲು ವಿಫಲವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ,.ಇದರ ನಡುವೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣಗೋಪಾಲ್ ನಿನ್ನೆ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸರಣಿ ಸಭೆ ನಡೆಸಿದ್ದಾರೆ,

ಯಾವೋಬ್ಬ ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡುವುದಾಗಿ ಘೋಷಿಸಿಲ್ಲ, ಇದೊಂದು ಕೇವಲ ಗಾಳಿ ಸುದ್ದಿ, ಸಂಕ್ರಾಂತಿ ಕ್ರಾಂತಿ ವಿಫಲವಾಗಿದೆ ಎಂದು ಡಿಸಿಎಂ. ಜಿ ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನ ಪ್ರತಿಯೊಬ್ಬ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ, ಬಿಜೆಪಿಯ ಈ ಕುತಂತ್ರಕ್ಕೆ ತಕ್ಕ ಪಾಠ ಕಲಿಸಲು ಬಿಜೆಪಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳುಪುದಾಗಿ  ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ.

ನಮ್ಮ ಶಾಸರು ಇನ್ನು ಎರಡು ದಿನ ರೆಸಾರ್ಟ್ ನಲ್ಲೇ ಇರಲಿದ್ದಾರೆ, ಕಾಂಗ್ರೆಸ್-ಜೆಡಿಎಸ್ ನಮ್ಮ ಶಾಸಕರನ್ನು ಸೆಳೆಯಲು ಯೋಜನೆ ರೂಪಿಸುತ್ತಿದೆ ಎಂದು ಬಿಜೆಪಿ ಎಂಎಲ್ ಸಿ ಎನ್, ರವಿಕುಮಾರ್ ಆರೋಪಿಸಿದ್ದಾರೆ,

ಆದರೆ ಕಾಂಗ್ರೆಸ್ ನ ಕೆಲವು ಶಾಸಕರು ಇನ್ನೂ ನಾಟ್ ರೀಚೆಬಲ್ ಆಗಿದ್ದಾರೆ, ಆನಂದ್ ಸಿಂಗ್, ಭೀಮಾ ನಾಯಕ್ ಮತ್ತುರಮೇಶ್ ಜಾರಕಿಹೊಳಿ, ಮಹೇಶ್ ಕುಮತ್ತಳ್ಳಿ ಹಾಗೂ ಉಮೇಶ್ ಜಾಧವ್ ಸಂಪರ್ಕಕ್ಕೆ ಸಿಗುತ್ತಿಲ್ಲ,

ಆದರೆ ಇದೆಲ್ಲಾ ಬೆಳವಣಿಗೆಗಳ ಮಧ್ಯೆ ಸಿಎಂ ಕುಮಾರಸ್ವಾಮಿ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿದರು, ಇನ್ನೂ ಕೆಲ ದಿನಗಳಲ್ಲಿ ಸಿಎಂ ಕುಮಾರ ಸ್ವಾಮಿ ಇಲಾಖಾವಾರು ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ,

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ