ಜ.24ರಿಂದ 30ರವರೆಗೆ ಇಮ್ಟೆಕ್-ಟೂಲ್-2019 ಪ್ರದರ್ಶನ

Varta Mitra News

ಬೆಂಗಳೂರು, ಜ.17- ಭಾರತೀಯ ಯಂತ್ರ ಸಾಧನ ಉತ್ಪಾದಕರ ಸಂಘ ( ಇಂಡಿಯನ್ ಮೆಷಿನ್ ಟೂಲ್ಸ್ ಮ್ಯಾನಿಪ್ಯಾಕ್ಚರರ್ಸ್ ಅಸೋಸಿಯೇಶನ್)ವು ಜ.24ರಿಂದ 30ರವರೆಗೆ ನಗರದ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಇಮ್ಟೆಕ್-ಟೂಲ್‍ಟೆಕ್-2019 ಆಯೋಜಿಸಿದೆ.
ಈ ಕುರಿತು ಐಎಂಟಿಎಂಎ ಅಧ್ಯಕ್ಷ ಜಮ್ಶಿದ್ ಎನ್.ಗೋದ್ರೇಜ್ ಮಾತನಾಡಿ, 50 ವರ್ಷಗಳ ಹಿಂದೆಯೇ ನಾವು ಜಾಗತಿಕ ಬೆಳವಣಿಗೆಗಳನ್ನು ಪ್ರದರ್ಶಿಸುವಲ್ಲಿ ನಮ್ಮ ಸಂಸ್ಥೆ ಮುಂದಾಳತ್ವ ವಹಿಸಿತ್ತು ಎಂದು ಹೇಳಿದರು.

ಮತ್ತೊಬ್ಬ ಅಧ್ಯಕ್ಷ ಪಿ.ರಾಮದಾಸ್ ಮಾತನಾಡಿ, ತಂತ್ರಜ್ಞಾನ ಉತ್ಸಾಹಿಗಳು ಇಮ್ಟೆಕ್ ನೋಡಲೇ ಬೇಕಾದ ಪ್ರದರ್ಶನವಾಗಿದೆ.ಸಾಗರೋತ್ತರ ದೇಶಗಳಲ್ಲಿ ವ್ಯಾಪಕವಾಗಿ ಜಾರಿಯಲ್ಲಿರುವ ಇತ್ತೀಚಿನ ತಂತ್ರಜ್ಞಾನಗಳನ್ನು ಪರಿಚಯಿಸಿ ನೇರ ಪ್ರದರ್ಶನ ಮಾಡಲಾಗುತ್ತದೆ.ಇಮ್ಟೆಕ್‍ನ ಪ್ರಸ್ತುತ ಆವೃತ್ತಿಯು ತ್ರಿಡಿ ಮುದ್ರಣ, ವಿಷಯಗಳ ಇಂಟರ್‍ನೆಟ್, ಯಾಂತ್ರೀಕರಣ, ರೋಬೊಟಿಕ್ಸ್ ಮತ್ತು ಉದ್ಯಮ 4.0ನಂತಹ ಮುಂದುವರೆದ ತಂತ್ರಜ್ಞಾನವನ್ನು ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದರು.

ಪ್ರದರ್ಶನದ ವೇಳೆ ತಂತ್ರಜ್ಞಾನಗಳ ಕುರಿತು ಸಮಾವೇಶವನ್ನು ಏರ್ಪಡಿಸಲಾಗುವುದು.ಪ್ರದರ್ಶನಕಾರರು ತಮ್ಮ ಮಳಿಗೆಗಳ ನಿರ್ಮಾಣದಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸವುದಕ್ಕೆ ಪೆÇ್ರೀ ನೀಡುವ ಸಲುವಾಗಿ ಐಎಂಟಿಎಂಎ ಎಕೋಡಿಸೈನ್ ಪ್ರಶಸ್ತಯನ್ನು ಆರಂಭಿಸಿದೆ.ಅತ್ಯುತ್ತಮ ಪರಿಸರ ಸ್ನೇಹಿ ಮಳಿಗೆಗಳಿಗೆ ಎಕೋಡಿಸೈನ್ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯನ್ನು 25ರಂದು ಪ್ರದಾನ ಮಾಡಲಾಗುತ್ತದೆ ಎಂದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ