ಬೆಂಗಳೂರು, ಜ.17-ಆನ್-ಲೈನ್ ಮೂಲಕ ಬಸ್ ಪ್ರಯಾಣದ ಟಿಕೆಟ್ಟನ್ನು ಕಾಯ್ದಿರಿಸುವ ಸಂಸ್ಥೆಯಾದ ಟ್ರಾವೆಲ್ಯಾರಿ ಕನ್ನಡ ಸೇರಿದಂತೆ ತಮಿಳು, ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವಂತಹ ಆ್ಯಪ್ ಸೇವೆಯನ್ನು ಆರಂಭಿಸಿದೆ.
2 ಮತ್ತು 3ನೇ ಸ್ತರದ ನಗರಗಳಲ್ಲಿ ದಿನದಿಂದ ದಿನಕ್ಕೆ ಇಂಟರ್ನೆಟ್ ಬಳಕೆ ಹೆಚ್ಚುತ್ತಿದೆ.ಹೀಗಾಗಿ ಹೆಚ್ಚಿನ ಜನರು ಆನ್-ಲೈನ್ ಶಾಪಿಂಗ್, ಬಿಲ್ ಗಳ ಪಾವತಿ, ಟಿಕೆಟ್ ಕಾಯ್ದಿರಿಸುವಿಕೆ ಮುಂತಾದ ಕೆಲಸಗಳಿಗೆ ಸ್ಮಾರ್ಟ್-ಫೆÇೀನುಗಳನ್ನೇ ಅವಲಂಬಿಸುತ್ತಿದ್ದಾರೆ.ಇದನ್ನು ಗಮನಿಸಿ, ಟ್ರಾವೆಲ್ಯಾರಿ ಸಂಸ್ಥೆಯು ಕೂಡ ಪ್ರಾದೇಶಿಕ ಭಾಷೆಗಳಲ್ಲೇ ಆ್ಯಪ್ ಸೇವೆಯನ್ನು ನೀಡಲು ಮುಂದಾಗಿದೆ.ಇದರಿಂದ ಹೆಚ್ಚು ಜನರಿಗೆ ಸುಲಭವಾಗಿ ಸೇವೆಗಳನ್ನು ಒದಗಿಸುವುದು ಕೂಡ ಸಾಧ್ಯವಾಗಲಿದೆ.
ಈ ಬಗ್ಗೆ ಮಾತನಾಡಿರುವ ಟ್ರಾವೆಲ್ಯಾರಿ ಸಂಸ್ಥೆಯ ಸಹಸಂಸ್ಥಾಪಕ ಮತ್ತು ಸಿಇಒ ಅರವಿಂದ್ ಲಾಮಾ ಮಾತನಾಡಿ, ದೇಶದ ವೈವಿಧ್ಯವನ್ನು ಗಮನಿಸಿ, ಅದಕ್ಕೆ ತಕ್ಕಂತೆ ಸೇವೆಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದರು.