
ಬೆಂಗಳೂರು, ಜ.16-ಆಪರೇಷನ್ ಕಮಲ ಫ್ಲ್ಯಾಪ್ ಆಗಿದೆ. ನಮ್ಮ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಯಡಿಯೂರಪ್ಪನವರು ಹಗಲುಗನಸು ಕಾಣುತ್ತಿದ್ದಾರೆ ಅದು ಈಡೇರುವುದಿಲ್ಲ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಐದು ವರ್ಷಗಳ ಕಾಲ ಅಧಿಕಾರ ಪೂರ್ಣಗೊಳಿಸಲಿದ್ದಾರೆ.ಅದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆಪರೇಷನ್ ಕಮಲ ವಿಫಲವಾಗಿದೆ.ಅತೃಪ್ತ ಶಾಸಕರು ಸಂಪರ್ಕದಲ್ಲಿದ್ದಾರೆ.ಒಬ್ಬೊಬ್ಬರಾಗಿ ಸಂಪರ್ಕಕ್ಕೆ ಸಿಗುತ್ತಿದ್ದಾರೆ.ಯಾರೂ ಪಕ್ಷ ಬಿಡುತ್ತಿಲ್ಲ ಎಂದು ಹೇಳಿದರು.
ಭೀಮಾನಾಯಕ್ ಸಂಪರ್ಕಕ್ಕೆ ಬಂದಿದ್ದು, ಮಾಜಿ ಸಚಿವ ರಮೇಶ್ಜಾರಕಿ ಹೊಳಿ, ನಾಗೇಂದ್ರ ನಾಳೆ ಬರುತ್ತಿದ್ದಾರೆ.ಯಾರೂ ಎಲ್ಲಿಗೂ ಹೋಗುವುದಿಲ್ಲ. ಸಚಿವ ಸ್ಥಾನ ವಂಚಿತರಾಗಿದ್ದರಿಂದ ಬೇಜಾರಾಗಿರಬಹುದು.ಆದರೆ ಪಕ್ಷ ತೊರೆಯುವುದಿಲ್ಲ. ವಾಪಸ್ ಬರುತ್ತಾರೆ ಎಂದು ತಿಳಿಸಿದರು.