ಟಿವಿ ಶೊನಲ್ಲಿ ಬೇಕಾ ಬಿಟ್ಟಿ ಮಾತನಾಡಿ ಭಾರೀ ವಿವಾದಕ್ಕೀಡಾಗಿ ನಂತರ ಅಮಾನತುಗೊಂಡಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಗೆ ವಿವರಣೆಯನ್ನ ನೀಡಿದ್ದಾರೆ.
ಆಸಿಸ್ ಸರಣಿಗೂ ಮುನ್ನ ಅಮಾನತು ಶಿಕ್ಷಗೆ ಗುರಿಯಾಗಿದ್ದ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ಗೆ ಬಿಸಿಸಿಐ ಶೋಕಾಸ್ ನೋಟೀಸ್ ನೀಡಿತ್ತು. ಈ ಇಬ್ಬರು ಆಟಗರರು ದೂರವಾಣಿ ಮೂಲಕ ಬಿಸಿಸಿಐಗೆ ಬೇಷರತ್ ಕ್ಷಮೆಯಾಚಿಸಿದ್ದರು.
ಇದೀಗ ಹಾರ್ದಿಕ್ ಮತ್ತು ರಾಹುಲ್ ಪ್ರಕರಣದ ಕುರಿತು ವಿವರಣೆಯನ್ನ ನೀಡಿದ್ದಾರೆ. ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಕ್ರಿಕೆಟ್ ಆಡಳಿತಗಾರರ ಸಮಿತಿಗೆ ವರದಿಯನ್ನ ನೀಡಲಿದ್ದಾರೆ.