ಬೆಂಗಳೂರು,ಜ.16-ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ತುಮಕೂರಿಗೆ ತೆರಳುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಪರೇಷನ್ ಕಮಲದ ಬಗ್ಗೆ ನಾನು ರಾಜ್ಯ ನಾಯಕರೊಂದಿಗೂ ಮಾತನಾಡಿಲ್ಲ ಎಂದು ಮಾಜಿ ಪ್ರಧಾನಿ ದೇವೆಗೌಡ ಹೇಳಿದರು.ಬಿಜೆಪಿಯವರು ಆಪರೇಷನ್ ಶುರು ಮಾಡಿದ್ದಾರೆ ಸಂತೋಷ ಎಂದು ಮಾರ್ಮಿಕವಾಗಿ ನುಡಿದರು.
ನಾಳೆ ಅಲ್ಪಸಂಖ್ಯಾತರ ಸಮಾವೇಶ ನಡೆಯಲಿದೆ.ಈ ಬಗ್ಗೆ ಸಿದ್ಧತೆಯಲ್ಲಿದ್ದೇನೆ. ನಮ್ಮ ಶಾಸಕರ ಬಗ್ಗೆ ಯಾವುದೇ ಚಿಂತೆ ಇಲ್ಲ. ನಮ್ಮ ಸೊಸೆ ಸೇರಿದಂತೆ ಎಲ್ಲರೂ ನಮ್ಮೊಂದಿಗಿದ್ದಾರೆ.ಎಲ್ಲ ಶಾಸಕರಿಗೂ ಸಮಾವೇಶಕ್ಕೆ ಸಂಬಂಧಿಸಿದಂತೆ ಜವಾಬ್ದಾರಿ ಹಂಚಿದ್ದೇನೆ. ಸಮಾವೇಶ ಯಶಸ್ವಿಗೊಳಿಸಲು ಕಾರ್ಯತತ್ಪರರಾಗಿದ್ದಾರೆ ಎಂದು ತಿಳಿಸಿದರು.