ಮುಂಬೈ: ಬಿಜೆಪಿಗೆ ಜೆಎನ್ ಯು ವಿದ್ಯಾರ್ಥಿ ಮುಖಂಡನಾದ ಕನ್ಹಯ ಕುಮಾರ್ ನನ್ನು ಟೀಕಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಶಿವಸೇನೆ ಹೇಳಿದೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ ಯು)ವಿದ್ಯಾರ್ಥಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ ಕುಮಾರ್ ವಿರುದ್ಧ ‘ದೇಶವಿರೋಧಿ’ ಎಂದು ಆರೋಪಿಸುವ ಬಿಜೆಪಿ ವರ್ತನೆಯನ್ನು ಪ್ರಶ್ನಿಸಿರುವ ಶಿವಸೇನೆ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಮೇಲೆಕೆ ಈ ಆರೋಪ ಹಾಕಲಿಲ್ಲ ಎಂದು ಕೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜತೆ ಮೈತ್ರಿ ಮಾಡಿಕೊಂಡ ಬಿಜೆಪಿಗೆ ಕನ್ಹಯ ಕುಮಾರ್ ನನ್ನು ಟೀಕಿಸುವ ಹಕ್ಕಿಲ್ಲ.ಕನ್ಹಯ ಕುಮಾರ್ ವಿರುದ್ಧ ಮಾತನಾಡಿ ರಾಜಕೀಯದ ಮೈಲೇಜ್ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಬೇಡಿ ಎಂದು ಶಿವಸೇನೆ ಬಿಜೆಪಿಗೆ ತಾಕೀತು ಮಾಡಿದೆ.
ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವನ್ನು “ಹುತಾತ್ಮ” ಎಂದಿದ್ದ ಪಿಡಿಪಿ ಮುಖ್ಯಸ್ಥೆ ಮುಫ್ತಿ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿ ಪಾಪಕೃತ್ಯವೆಸಗಿದೆ ಎಂದು ಶಿವಸೇನೆ ತನ್ನ ಮುಖವಾಣಿ “ಸಾಮ್ನಾ” ಪತ್ರಿಕಾ ಸಂಪಾದಕೀಯದಲ್ಲಿ ಹೇಳಿದೆ.
ಅಫ್ಜಲ್ ಗುರುವಿನಂತಹಾ ಭಯೋತ್ಪಾದಕರನ್ನು ಮಣ್ಣಿನ ಮಕ್ಕಳು ಎಂದಿದ್ದ ಮುಫ್ತಿ ವಿರುದ್ಧ ಯಾವುದೇ ಪ್ರಕರಣ ದಾಖಲಿಸದೆ ಕೇವಲ ಕನ್ಹಯ ಮೇಲೇಕೆ ಪ್ರಕರಣ ದಾಖಲಿಸಿದ್ದೀರಿ? ಎಂದು ಶಿವಸೇನೆ ಪ್ರಶ್ನಿಸಿದೆ.
What Moral Right Does BJP Have To Condemn Kanhaiya Kumar?: Shiv Sena