ಬೆಂಗಳೂರು, ಜ.16-ಕುಮಾರಕೃಪಾದಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಆಗಮಿಸಿದಶಾಸಕ ಬಸವರಾಜ್ ದದ್ದಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾಧ್ಯಮಗಳಲ್ಲಿ ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸಲಾಗುತ್ತಿದೆ.ಬಸವರಾಜ್ ಗದ್ದಲ್ ನಾಪತ್ತೆಯಾಗಿದ್ದಾರೆ.ಬಿಜೆಪಿಗೆ ಹೋಗಿದ್ದಾರೆ. ಅವರನ್ನು ಕಾಂಗ್ರೆಸ್ ನಾಯಕರು ಬಲವಂತಾಗಿ ಕರೆತಂದಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಶುದ್ಧ ಸುಳ್ಳು.ನಾನು ಎಲ್ಲಿಯೂ ಹೋಗಿಲ್ಲ. ಕ್ಷೇತ್ರದಲ್ಲೇ ಇದ್ದೇನೆ. ನನ್ನ ಫೆÇೀನ್ ಕೂಡ ಸ್ವಿಚ್ಆಫ್ ಆಗಿಲ್ಲ. ಈ ರೀತಿಯ ಸುದ್ದಿ ಹರಡುವ ಮೊದಲು ಕನಿಷ್ಠ ನನ್ನದೊಂದು ಮಾತು ಕೇಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.