ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾರನ್ನು ವಜಾಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಕಾನೂನು ಬಾಹಿರವಾದದ್ದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಖರ್ಗೆ, ಸಿಬಿಐ ನಿರ್ದೇಶಕ ಸ್ಥಾನದಲ್ಲಿದ್ದ ವರ್ಮಾ ಅವರನ್ನು ವಜಾ ಮಾಡಿ, ಆ ಸ್ಥಾನಕ್ಕೆ ಎಂ.ನಾಗೇಶ್ವರ್ ರಾವ್ ಅವರನ್ನು ನೇಮಕಮಾಡಿರುವುದು ಕಾನೂನು ಬದ್ಧವಾದ ಕ್ರಮವಲ್ಲ. ಇದು ಆಯ್ಕೆ ಸಮಿತಿ ಅನುಮೋದನೆಯನ್ನೂ ಪಡೆದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ಜನವರಿ 10ರ ಸಭೆಯ ನಡಾವಳಿಗಳನ್ನು,ಸಿವಿಸಿ ವರದಿ ಹಾಗೂ ನಿವೃತ್ತ ನ್ಯಾ. ಪಟ್ನಾಯಕ್ ವರದಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಎಂದು ಸವಾಲು ಹಾಕಿದ್ದಾರೆ. ಸಿಬಿಐಗೆ ಹೊಸ ನಿರ್ದೇಶಕರನ್ನು ಆಯ್ಕೆ ಮಾಡಲು ಕೂಡಲೆ ಆಯ್ಕೆ ಸಮಿತಿ ಸಭೆ ಕರೆಯುವಂತೆಯೂ ಖರ್ಗೆ ಒತ್ತಾಯಿಸಿದ್ದಾರೆ.
Make Details Of Meeting On Ex-CBI Chief Public: Mallikarjun Kharge to PM