ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ಯುಎಸ್ಗೆ ತೆರಳಿದ್ದಾರೆ.
ವೈದ್ಯಕೀಯ ತಪಾಸಣೆಗಾಗಿ ಭಾನುವಾರ ರಾತ್ರಿಯೇ ಯುಎಸ್ಗೆ ಹೋಗಿದ್ದಾರೆ. ಫೆ.1ರಂದು ಕೇಂದ್ರ ಸರ್ಕಾರದ ಕೊನೇ ಬಜೆಟ್ ಮಂಡನೆಯಾಗಲಿದ್ದು ಅಂದು ಜೇಟ್ಲಿ ಹಾಜರಾಗಲೇಬೇಕಾಗಿದೆ. ಇದು ಅವರ ಆರನೇ ಆಯವ್ಯಯ ಮಂಡನೆಯಾಗಿದೆ.
2018ರ ಏಪ್ರಿಲ್ನಲ್ಲಿ ಅರುಣ್ ಜೇಟ್ಲಿ ಕಿಡ್ನಿ ಸಮಸ್ಯೆಯಿಂದ ಏಮ್ಸ್ಗೆ ದಾಖಲಾಗಿದ್ದರು. ನಂತರ ಮೇ 14ರಂದು ಅವರಿಗೆ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಆಗ ರೈಲ್ವೆ ಸಚಿವರಾಗಿದ್ದ ಪಿಯುಷ್ ಗೋಯಲ್ ಅವರಿಗೇ ಹಣಕಾಸು ಖಾತೆಯನ್ನು ವಹಿಸಲಾಗಿತ್ತು.
Arun Jaitley flies to US for medical check-up