
ಬೆಂಗಳೂರು, ಜ.15- ನೆನ್ನೆ ನಡೆದ ಸಚಿವರ ಉಪಹಾರ ಕೂಟದಲ್ಲಿ ಪ್ರಿಯಾಂಕ್ ಅವರು ತಾವು ರಾಜೀನಾಮೆ ನೀಡಲು ಸಿದ್ಧ ತಮಗೆ ಪಕ್ಷದ ಹಿತಾಸಕ್ತಿ ಮುಖ್ಯ. ಹೈಕಮಾಂಡ್ ಬಯಸುವುದಾದರೆ ನಾನು ರಾಜೀನಾಮೆ ಕೊಡುತ್ತೇನೆ. ಯಾರನ್ನು ಬೇಕಾದರೂ ಸಚಿವರನ್ನಾಗಿ ಮಾಡಿ ಎಂದು ಹೇಳಿದ್ದರು.
ಪ್ರಿಯಾಂಕ್ ಖರ್ಗೆ ಅವರನ್ನು ಸಚಿವರನ್ನಾಗಿ ಮಾಡಿರುವುದಕ್ಕೆ ಅಸಮಾಧಾನಗೊಂಡಿರುವ ಉಮೇಶ್ಜಾದವ್ ಅವರು ಬಿಜೆಪಿಗೆ ಹೋಗಲು ತಯಾರಿ ನಡೆಸಿದ್ದಾರೆ. ಅತ್ತ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಅಜಯ್ಸಿಂಗ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಪ್ರಿಯಾಂಕ್ ಅವರು ರಾಜಕೀಯ ವಾಸ್ತವತೆಗಳ ಮೇಲೆ ಗಂಭೀರ ಚರ್ಚೆ ನಡೆಸಿದ್ದು, ತಮಗೆ ಅಧಿಕಾರದ ಮೇಲೆ ವ್ಯಾಮೋಹವಿಲ್ಲ. ಹೈಕಮಾಂಡ್ ಅವಕಾಶ ಕೊಟ್ಟಿದೆ ಕೆಲಸ ಮಾಡುತ್ತಿದ್ದೇನೆ. ಬೇಡವೆಂದರೆ ರಾಜೀನಾಮೆ ನೀಡಿ ಪಕ್ಷದ ಪರ ಕೆಲಸ ಮಾಡಲು ಸಿದ್ಧ ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ವೇಣುಗೋಪಾಲ್ ಇಂದು ಬೆಳಗ್ಗೆ ಪ್ರಿಯಾಂಕ್ ಅವರನ್ನು ಸಮಾಧಾನಪಡಿಸಿದ್ದಾರೆ ಎಂದು ಹೇಳಲಾಗಿದೆ.
ಅವರ ಜತೆಗೆ ಪಿ.ಟಿ.ಪರಮೇಶ್ವರ್ನಾಯಕ್, ರಾಜಶೇಖರ್ಪಾಟೀಲ್, ಜಮೀರ್ ಆಹಮ್ಮದ್ಖಾನ್, ಶಿವಶಂಕರ್ರೆಡ್ಡಿ ಅವರುಗಳು ಹೈಕಮಾಂಡ್ ಬಯಸಿದ್ದೇ ಆದರೆ ರಾಜೀನಾಮೆ ನೀಡಲು ಸಿದ್ಧ ಎಂಬ ಮುನ್ಸೂಚನೆ ನೀಡಿದ್ದಾರೆ.
ಆದರೆ, ಈ ಸಾಧ್ಯಾಸಾಧ್ಯತೆಗಳು ಕ್ಷೀಣವಾಗಿದ್ದು, ಶಾಸಕರ ಬ್ಲಾಕ್ಮೇಲ್ಗೆ ಮಣಿದು ಸಚಿವರ ರಾಜೀನಾಮೆ ಪಡೆದು ಅತೃಪ್ತರನ್ನು ಸಚಿವರನ್ನಾಗಿ ಮಾಡಿದರೆ ರಾಜಕೀಯದಲ್ಲಿ ಅದು ಕೆಟ್ಟ ಪರಂಪರೆಯಾಗಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ಅತೃಪ್ತರು ಭುಗಿಲೇಳಲಿದ್ದಾರೆ.ಎಲ್ಲರಿಗೂ ಸಚಿವ ಸ್ಥಾನ ನೀಡಿ ಸಮಾಧಾನಪಡಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಹೇಗೆ ಬರುತ್ತದೋ ಹಾಗೆ ನಿಭಾಯಿಸುವುದು ಸೂಕ್ತ.ಒತ್ತಾಯ ಪೂರ್ವಕವಾಗಿ ಯಾರ ರಾಜೀನಾಮೆ ಪಡೆಯುವುದು ಬೇಡ ಎಂದು ರಾಜ್ಯ ಕಾಂಗ್ರೆಸ್ನ ಹಿರಿಯ ನಾಯಕರು ಹೈಕಮಾಂಡ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.