
ಬೆಂಗಳೂರು, ಜ.15- ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೋರಿದ್ದಾರೆ.
ಉತ್ತರಾಯಣ ಪುಣ್ಯಕಾಲದ ಆರಂಭದ ಸಂಕ್ರಾಂತಿ ಹಬ್ಬವು ರೈತರ ಪಾಲಿಗೆ ಸುಗ್ಗಿಯ ಹಬ್ಬವೂ ಆಗಿದೆ.ಮಕರ ಸಂಕ್ರಾಂತಿ ಹಬ್ಬವು ನಾಡಿನ ಎಲ್ಲ ಜನರಿಗೂ ಸುಖ-ಶಾಂತಿ-ಸಮೃದ್ಧಿ ಹಾಗೂ ನೆಮ್ಮದಿ ತರಲಿ ಎಂದು ಹಾರೈಸಿದ್ದಾರೆ.