
ಬೆಂಗಳೂರು, ಜ.15- ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರು ಟ್ವಿಟ್ಟರ್ ಮೂಲಕ ನಾಡಿನ ಸಮಸ್ತ ಜನತೆಗೆ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು.ಈ ಸಂದರ್ಭದಲ್ಲಿ ರೈತಪರ ಸರ್ಕಾರವನ್ನು ಕದಡಿಸಲು ಪ್ರಯತ್ನಿಸುವ ದುಷ್ಟ ಶಕ್ತಿಗಳ ಊರು ಭಂಗವಾಗಲಿ ಎಂದು ಹೇಳಿದ್ದಾರೆ.
ಈ ಪರ್ವ ಅನ್ನದಾತರಾದ ರೈತರು ಹಾಗೂ ನಾಡಿನ ಸಮಸ್ತ ಜನತೆಯ ಮನೆ-ಮನಗಳಲ್ಲಿ ಸುಖ-ಶಾಂತಿ-ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ.