ಸಿಡ್ನಿ : ಸಿಡ್ನಿ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 34 ರನ್ಗಳ ಸೋಲು ಅನುಭವಿಸಿ ಮೊದಲ ಪಂದ್ಯದಲ್ಲೆ ಮುಗ್ಗರಿಸಿ ಬಿದ್ದಿದೆ.
289ರನ್ಗಳ ಸವಾಲನ್ನ ಬೆನ್ನಟ್ಟಿದೆ ಕೊಹ್ಲಿ ಪಡೆ ಆರಂಭದಲ್ಲೆ ಆಘಾತಗಳ ಆಘಾತ ಅನುಭವಿಸಿ ಸೋಲಿನ ಸುಳಿಯಲ್ಲಿ ಸಿಲುಕಿತು. ಆದರೆ ನಾಲ್ಕನೆ ವಿಕೆಟ್ಗೆ ಜೊತೆಗೂಡಿದ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಮತ್ತು ಎಂ.ಎಸ್. ಧೋನಿ 137 ಜೊತೆಯಾಟ ನೀಡಿ ಗೆಲುವಿನ ಆಸೆಯನ್ನ ಚಿಗೊರೊಡೆಸಿದ್ರು. ಆದೆರೆ ಧೋನಿ ಅರ್ಧ ಶತಕ ಬಾರಿಸಿ ಔಟ್ಆಗುತ್ತಿದ್ದಂತೆ ಟೀಂ ಇಂಡಿಯಾ ಮತ್ತೆ ಸಂಕಷ್ಟದಲ್ಲಿ ಸಿಲುಕಿತು. ರೋಹಿತ್ ಶರ್ಮಾ ಏಕಾಂಗಿ ಹೋರಾಟ ನಡೆಸಿ ಶತಕ ಬಾರಿಸಿ ಮಿಂಚಿದ್ರು. ಆದರೆ ಕೊನೆಯವರೆಗೂ ರೋಹಿತ್ ಹೋರಾಟ ಫಲ ನೀಡಲಿಲ್ಲ. ಟೀಂ ಇಂಡಿಯಾ ಕೊನೆಯಲ್ಲಿ 9 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತು. ಇದಕ್ಕೂ ಮುನ್ನ ಆಸ್ಟ್ರೇಲಿಯಾ 9 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿತು.