ಸಿಡ್ನಿ: ಟಿವಿ ಶೋವೊಂದರಲ್ಲಿ ಅಸಭ್ಯವಾಗಿ ಮಾತನಾಡಿ ಆಸ್ಟ್ರೇಲಿಯಾ ಸರಣಿಯಿಂದ ಅಮಾನತು ಶಿಕ್ಷಗೆ ಗುರಿಯಾಗಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಜಾಗಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತು ಆಲ್ರೌಂಡರ್ ವಿಜಯ್ ಶಂಕರ್ ಆಡುವ ಸಾಧ್ಯತೆ ಇದೆ.
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿ ಭಾರಿ ವಿವಾದಕ್ಕೀಡಾಗಿದ್ದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ಗೆ ಆಡಳಿತಗಾರರ ಸಮಿತಿ ಇಡೀ ಸರಣಿಯಿಂದಲೇ ನಿಷೇಧ ಪ್ರಕರಣದ ಬಗ್ಗೆ ತನಿಖೆ ನಡೆಸಲು ತವರಿಗೆ ಮರಳಲು ಸೂಚಿಸಿತ್ತು.
ಇದೀಗ ಮತ್ತೋಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ಗೆ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ಆವೃತ್ತಿ ಆಡಲು ಅವಕಾಶ ಒದಗಿ ಬಂದಿದೆ. ಇತ್ತಿಚೆಗೆ ನಡೆದ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಎರಡು ಅರ್ಧಶತಕ ಬಾರಿಸಿ ಮಿಂಚಿದ್ರು.
ಇನ್ನು ತಮಿಳುನಾಡಿನ ವಿಜಯ್ ಶಂಕರ್ ಕಳೆದ ವರ್ಷ ನಿಧಾಸ್ ಟಿ20 ಟೂರ್ನಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.