ಯುವತಿ ಹತ್ಯೆ ಪ್ರಕರಣ: ಬಿಜೆಪಿ ನಾಯಕ ಸೇರಿ ಐವರ ಬಂಧನ

ಇಂದೋರ್​: 22 ವರ್ಷದ ಯುವತಿಯನ್ನು ಕೊಲೆಗೈದಿದ್ದ ಬಿಜೆಪಿ ನಾಯಕ ಮತ್ತು ಆತನ ಮೂವರು ಮಕ್ಕಳು ಸೇರಿ ಐವರನ್ನು ಮಧ್ಯಪ್ರದೇಶದ ಇಂಧೋರ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ನಿವಾಸಿಯಾಗಿದ್ದ ಟ್ವಿಂಕಲ್​ ಡಾಗ್ರೆ ಅವರ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕ ಜಗದೀಶ್​ ಕರೋಟಿಯ ಅಲಿಯಾಸ್​ ಕಲ್ಲು ಪೈಲ್ವಾನ್​ (65) ಮಕ್ಕಳಾದ ಅಜಯ್​ (36), ವಿಜಯ್​ (28), ವಿನಯ್​ (31) ಮತ್ತು ಜಗದೀಶ್​ ಸಹವರ್ತಿ ನೀಲೇಶ್​ ಕಶ್ಯಪ್​ (28) ಎಂಬವರನ್ನು ಬಂಧಿಸಲಾಗಿದೆ ಎಂದು ಇಂಧೋರ್​ನ ಡಿಐಜಿ ಹರಿನಾರಾಯಣಚಾರಿ ಮಿಶ್ರ ಮಾಹಿತಿ ನೀಡಿದ್ದಾರೆ.

2016ರ ಅಕ್ಟೋಬರ್​ 16ರಂದು ಟ್ವಿಂಕಲ್​ ಅವರನ್ನು ಕೊಲೆಗೈದು ಆಕೆಯನ್ನು ಸುಟ್ಟು ಹಾಕಲಾಗಿತ್ತು. ಸುಟ್ಟು ಹಾಕಿದ್ದ ಜಾಗದಲ್ಲಿ ಯುವತಿಯ ಬ್ರೇಸ್​ಲೆಟ್​​ ಮತ್ತು ಇತರ ಆಭರಣಗಳು ಸಿಕ್ಕಿದವು. ಇದರಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ಬಲೆಗೆ ಬಿದ್ದಿದ್ದಾರೆ ಎಂದು ಮಿಶ್ರ ತಿಳಿಸಿದ್ದಾರೆ.

ಆರೋಪಿಗಳು ಯುವತಿ ಹತ್ಯೆ ಯೋಜನೆ ರೂಪಿಸುವ ಮೊದಲು ದೃಶ್ಯಂ ಚಿತ್ರವನ್ನು ನೋಡಿದ್ದರು. ಬಳಿಕ ಅದರಿಂದ ಪ್ರೇರಣೆಗೊಂಡು ಹತ್ಯೆ ಸಂಚು ರೂಪಿಸಿ, ಮೊದಲು ಒಂದು ಸ್ಥಳದಲ್ಲಿ ನಾಯಿಯನ್ನು ಸುಟ್ಟುಹಾಕಿ ಅಲ್ಲಿ ಮನುಷ್ಯನ ದೇಹ ಸುಟ್ಟುಹಾಕಲಾಗಿದೆ ಎಂಬ ಸುದ್ದಿ ಹಬ್ಬಿಸುತ್ತಾರೆ. ಪೊಲೀಸ್​ ತನಿಖೆ ನಂತರ ಅಲ್ಲಿ ಸುಟ್ಟಿರುವುದು ನಾಯಿಯ ದೇಹವೇ ಎಂಬುದು ಖಚಿತವಾಗುತ್ತದೆ. ಈ ಮೂಲಕ ಪೊಲೀಸ್​ ತನಿಖೆಯನ್ನು ದಾರಿ ತಪ್ಪಿಸುವ ಆರೋಪಿಗಳು, ನಾಯಿ ಸುಟ್ಟು ಹಾಕಿದ್ದ ಜಾಗದಲ್ಲೇ ಟ್ವಿಂಕಲ್​ ದೇಹವನ್ನು ಸುಟ್ಟಿದ್ದಾರೆ ಎಂದು ಮಿಶ್ರ ಘಟನೆ ಕುರಿತು ವಿವರಿಸಿದ್ದಾರೆ.

ಕೊಲೆಯಾದ ಯುವತಿ ಆರೋಪಿ ಜಗದೀಶ್​ ಜತೆ ಅಕ್ರಮ ಸಂಬಂಧ ಹೊಂದಿದ್ದರು ಮತ್ತು ಆತನ ಜತೆಯೇ ಇರಲು ಬಯಸಿದ್ದರು. ಈ ವಿಚಾರ ಕುಟುಂಬದವರಿಗೆ ತಿಳಿದ ನಂತರ ಜಗಳ ಆರಂಭವಾಗಿದೆ. ಇದೇ ಕಾರಣಕ್ಕಾಗಿ ಟ್ವಿಂಕಲ್​ರನ್ನು ಹತ್ಯೆಗೈಯ್ಯಲಾಗಿದೆ ಎಂದು ತಿಳಿದುಬಂದಿದೆ.

5 Men Watched “Drishyam” Before Murder, Buried Dog To Mislead

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ