ಟಿವಿ ಟಾಕ್ ಶೋನಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿ ಅಮಾನತು ಶಿಕ್ಷೆಗೆ ಗುರಿಯಾಗಿ ಆಸಿಸ್ ವಿರುದ್ಧದ ಏಕದಿನ ಸರಣಿಯಿಂದಲೇ ಗೇಟ್ ಪಾಸ್ ಪಡೆದಿರುವ ಪೋಲಿ ಪಾಂಡ್ಯ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ಗೆ ಈಗ ಸಾಲು ಸಾಲು ಸಂಕಷ್ಟಗಳ ಎದುರಾಗಿದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ತವರಿಗೆ ಮರಳಿದ ಪಾಂಡ್ಯ – ಕೆ.ಎಲ್. ರಾಹುಲ್
ಆಸಿಸ್ ವಿರುದ್ಧದ ಏಕದಿನ ಸರಣಿಯಿಂದ ಗೇಟ್ ಪಾಸ್ ಪಡೆದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಇದೀಗ ತವರಿಗೆ ಮರಳಿದ್ದಾರೆ. ಆಸಿಸ್ ಸರಣಿಗೂ ಈ ಇಬ್ಬರು ಆಟಗಾರರಿಗೆ ಎರಡು ಪಂದ್ಯಗಳಿಂದ ಮಾತ್ರ ನಿಷೇಧ ಏರುತ್ತೆ ಎಂದು ಎಲ್ಲರೂ ಭಾವಿಸಿದ್ರು ಆದ್ರೆ ಸರಣಿಯಿಂದಲೇ ಇಬ್ಬರನ್ನು ಹೊರಗಿಟ್ಟು ತವರಿಗೆ ಮರಳುವಂತೆ ಸೂಚಿಸಿತ್ತು.
ಐಪಿಎಲ್ ಆಡಿಸಬೇಡಿ ಎಂದ ಕ್ರಿಕೆಟ್ ಅಭಿಮಾನಿಗಳು
ಟಾಕ್ ಶೋನಲ್ಲಿ ಅಶ್ಲೀಲ ನಾಲಗೆಯನ್ನ ಹೊರಬಿಟ್ಟ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಇದೀಗ ಕಲ್ಲರ್ ಫುಲ್ ಟೂರ್ನಿ ಐಪಿಎಲ್ ಟೂರ್ನಿಯನ್ನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಅಭಿಮಾನಿಗಳು ಈ ಇಬ್ಬರು ಆಟಗಾರರಿಗೆ ಐಪಿಎಲ್ನಿಂದಲೂ ಬ್ಯಾನ್ ಮಾಡಿ ಅಂತ ಮನವಿ ಮಾಡಿದ್ದಾರೆ. ಟಿವಿ ಶೋ ಕಾರ್ಯಕ್ರಮದ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಕಾರಣ ಹಾರ್ದಿಕ್ ಮತ್ತು ರಾಹುಲ್ ಆಸಿಸ್ ಸರಣಿಯಿಂದ ಅಮಾನತುಗೊಂಡಿದ್ರು.
ಪಾಂಡ್ಯ ಕೈ ತಪ್ಪಿದ ಬ್ರಾಂಡ್ ರಾಯಬಾರಿ ಒಪ್ಪಂದ
ಆಸ್ಟ್ರೇಲಿಯಾ ಏಕದಿನ ಪಂದ್ಯದಿಂದ ಅಮಾನತುಗೊಂಡಿರುವ ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಅವರ ತಾರಾ ಮೌಲ್ಯಕ್ಕೂ ಹೊಡೆತ ಬಿದಿದ್ದೆ.ವಿವಾದದ ಕೇಂದ್ರ ಬಿಂದುವಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಗಿಲೆಟ್ ಮ್ಯಾಕ್ 3 ಪುರುಷರ ಶೇವಿಂಗ್ ಜಾಹಿರಾತು ಒಪ್ಪಂದಗಳಿಂದ ಕೈ ಬಿಡಲಾಗಿದೆ.
ಪಾಂಡ್ಯ-ರಾಹುಲ್ ಜೊತೆ ಒಂದೇ ಬಸ್ನಲ್ಲಿ ಪ್ರಯಾಣಿಸೊಲ್ಲ..!
ಕೆ. ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ವಿರುದ್ಧ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಹರಿಹಾಯ್ದಿದ್ದಾರೆ. ಮೊನ್ನೆಯಷ್ಟೆ ಆಟಗಾರರ ಖ್ಯಾತಿಗೆ ಹಾನಿಯುಂಟು ಮಾಡಿದ್ದಾರೆ ಎಂದ ಭಜ್ಜಿ ನಿನ್ನೆ ಮಹಿಳೆಯರ ಬಗ್ಗೆ ಕೀಳು ಅಭಿರುಚಿ ಹೊಂದಿರುವ ಇಂತಹ ಆಟಗಾರರ ಜೊತೆ, ಒಂದೇ ಬಸ್ನಲ್ಲಿ ಪತ್ನಿ ಮತ್ತು ಮಗಳನ್ನು ಕರೆದುಕೊಂಡು ಹೋಗುವುದಾದ್ರು ಹೇಗೆ ಎಂದು ಪ್ರಶ್ನಿಸಿದ್ದಾರೆ.
ವಿಶ್ವಕಪ್ ಕಳೆದುಕೊಳ್ಳುವ ಭೀತಿಯಲ್ಲಿ ಆಲ್ರೌಂಡರ್, ಓಪನರ್
ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಬರೀ ಐಪಿಎಲ್ ಮತ್ತು ಬ್ರಾಂಡ್ಗಳನ್ನ ಮಾತ್ರ ಕಳೆದುಕೊಳ್ಳೊದಿಲ್ಲ ಬದಲಿಗೆ ಇಂಗ್ಲೆಂಡ್ನಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವಕಪ್ನ್ನ ಕೂಡ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಬಗ್ಗೆ ಸ್ವತಃ ಡೈಯಾನಾ ಎಡುಲ್ಜಿ ವಿಶ್ವಕಪ್ನಿಂದಲೂ ರಾಹುಲ್ – ಹಾರ್ದಿಕ್ ಔಟ್ ಆಗಬಹುದೆನ್ನುವ ಸುಳಿವು ನೀಡಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ಒಂದು ಒಳ್ಳೆ ಪಾಠ ಆಗಿದೆ. ತನ್ನ ಟ್ಯಾಲೆಂಟ್ ಮೂಲಕವೇ ಈ ಮಟ್ಟಿಗೆ ತಲುಪಿದ್ದಾನೆ. ಮಾಡಿದ ತಪ್ಪಿನಿಂದ ಕಂಡಿತವಾಗಿಯೂ ಹಾರ್ದಿಕ್ ಪಾಠ ಕಲಿಯುತ್ತಾನೆ . ಜೊತೆಗೆ ಸಂಪೂರ್ಣವಾಗಿ ಬದಲಾಗುತ್ತಾರೆ ಎಂದು ಕಿರಣ್ ಮೋರೆ ಹೇಳಿದ್ದಾರೆ.
ಒಟ್ಟಾರೆ ರಾಹುಲ್ ಮತ್ತು ಹಾರ್ದಿಕ್ ತಮ್ಮ ಸುತ್ತ ಇಗೀಗ ಎದ್ದಿರುವ ಸಂಕಷ್ಟಗಳನ್ನ ಹೇಗೆ ಗೆದ್ದು ಬರುತ್ತಾರೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.