ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್. ಧೋನಿ ನಿನ್ನೆ ಸಿಡ್ನಿಯಲ್ಲಿ ಅರ್ಧ ಶತಕ ಬಾರಿಸಿ ಶೈನ್ ಆದ್ರು. ಇದರೊಂದಿಗೆ ತಮ್ಮನ್ನ ಟೀಕಿಸುತ್ತಿದ್ದವರ ಬಾಯಿ ಮುಚ್ಚಿಸಿ ಮುಂಬರುವ ವಿಶ್ವಕಪ್ಗೆ ಆಡಲು ಫಿಟ್ ಆಗಿದ್ದೇನೆ ಅಂತಾ ಬ್ಯಾಟ್ ಮೂಲಕ ಉತ್ತರ ಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಅಂಗಳದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಎಂ. ಎಸ್ ಧೋನಿ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಆಸಿಸ್ ನೀಡಿದ ಬೃಹತ್ ಮೊತ್ತ ಬೆನ್ನತ್ತಿದ ಟೀಮ್ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. 5 ಓವರ್ಗಳನ್ನ ಮುಗಿಸುವಷ್ಟರಲ್ಲೇ ಕೇವಲ 4 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಧೋನಿ ನೆರವಾಗಿದ್ರು.
ರೋಹಿತ್ ಜೊತೆ ಧೋನಿ ಬೊಂಬಾಟ್ ಬ್ಯಾಟಿಂಗ್..!
ಐದನೇ ಕ್ರಮಾಂಕದಲ್ಲಿ ಬಂದ ಮಿಸ್ಟರ್ ಕೂಲ್ ಧೋನಿ ಓಪನರ್ ರೋಹಿತ್ ಶರ್ಮಾ ಜೊತೆಗೂಡಿ ಅಡಿuಛಿiಚಿಟ ಇನ್ನಿಂಗ್ಸ್ ಕಟ್ಟಿಕೊಟ್ಟು ತಂಡವನ್ನ ಅಲ್ಪ ಮೊತ್ತದಿಂದ ಕುಸಿಯುವ ಭೀತಿಯಿಂದ ಪಾರು ಮಾಡಿದ್ರು. ಆರಂಭದಲ್ಲಿ ರೋಹಿತ್ ಜೊತೆ ಸ್ಲೋ ಅಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಿದ ಧೋನಿ ರೋಹಿತ್ ಜೊತೆಗೂಡಿ 137 ರನ್ಗಳ ಜೊತೆಯಾಟ ನೀಡಿ ಗೆಲುವಿನ ಆಸೆಯನ್ನ ಚಿಗೊರೊಡೆಸಿದ್ರು.
68ನೇ ಶರ್ಧ ಶತಕ ಬಾರಿಸಿದ ರಾಂಚಿ ಱಂಬೊ
ರೋಹಿತ್ ಜೊತೆ ಸಾಲಿಡ್ ಬ್ಯಾಟಿಂಗ್ ಮಾಡಿದ ರಾಂಚಿ ಱಂಬೊ 93ನೇ ಎಸತದಲ್ಲಿ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ್ರು. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 68ನೇ ಅರ್ಧ ಶತಕ ಬಾರಿಸಿದ ಸಾಧನೆ ಮಾಡಿದ್ರು.
ಅರ್ಧ ಶತಕ ಬಾರಿಸಿದ ಧೋನಿ
ಎಸೆತ – 95
ರನ್ – 51
4/6 – 3/1
ಸ್ಟ್ರೈಕ್ ರೇಟ್ – 53.12
ಎಂ.ಎಸ್. ಧೋನಿ ಒಟ್ಟು 95 ಎಸೆತಗಳನ್ನ ಎದುರಿಸಿ 51 ರನ್ ಗಳಿಸಿದ್ರು. ಇದರಲ್ಲಿ 3 ಬೌಂಡರಿ 1 ಸಿಕ್ಸರ್ ಬಾರಿಸಿ 53.12 ಸ್ಟ್ರೈಕ್ ರೇಟ್ ಪಡೆದ್ರು.
ಟೀಂ ಇಂಡಿಯಾ ಪರ ಹತ್ತು ಸಾವಿರ ರನ್ ಪೂರೈಸಿದ ಧೋನಿ
ಆಸಿಸ್ ವಿರುದ್ಧ ಆರನೇ ಓವರನಲ್ಲಿ ಒಂಟಿ ರನ್ ತೆಗೆಯುವ ಮೂಲಕ ಧೋನಿ ಏಕದಿನ ಕ್ರಿಕೆಟ್ನಲ್ಲಿ ಹತ್ತು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ರು. 330ನೇ ಏಕದಿನ ಪಂದ್ಯ ಆಡಿದ ಧೋನಿ 279 ಇನ್ನಿಂಗ್ಸ್ ಗಳಿಂದ ಹತ್ತು ಸಾವಿರ ರನ್ ಪೂರೈಸಿದ್ದಾರೆ.
ಒಂದು ವರ್ಷದ ನಂತ್ರ ಅರ್ಧಶತಕ ಸಿಡಿಸಿದ ಮಾಹಿ
ಇನ್ನು ಧೋನಿ ಬರೋಬ್ಬರಿ ಒಂದು ವರ್ಷದ ನಂತ್ರ ಅರ್ಧಶತಕ ದಾಖಲಿಸಿದ್ದಾರೆ. ಕಳೆದ ವರ್ಷ ತವರಿನಲ್ಲಿ ಧರ್ಮಶಾಲಾದಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದು ಕೊನೆ ಬಾರಿಯಾಗಿತ್ತು. ಆ ಪಂದ್ಯದಲ್ಲಿ 65 ರನ್ ಬಾರಿಸಿ ರಾಂಚಿ ಱಂಬೊ ನಂತರ ಬ್ಯಾಕ್ ಬ್ಯಾಕ್ ಫ್ಲಾಪ್ ಆಗಿದ್ರು.