ಹುಬ್ಬಳ್ಳಿ,ಜ.13- ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಕ್ಲರ್ಕ್ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಉನ್ನತ ಹುದ್ದೆಯಲ್ಲಿರುವವರು ಈ ರೀತಿ ಮಾತನಾಡುವುದು ಅವರ ಶೋಭೆಗೆ ತಕ್ಕದ್ದಲ್ಲ ಎಂದು ಎಂಎಲ್ಸಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ-ಜೆಡಿಎಸ್ ಸರ್ಕಾರ ಇದ್ದಾಗ ಮುಖ್ಯಮಂತ್ರಿ ವಿರುದ್ಧದೂರು ನೀಡಿದ್ದರು. ಆಗ ನಾನೇ 14 ಬಾರಿ ಬಿಎಸ್ವೈ ಮನೆಗೆ ಹೋಗಿ ಬಗೆಹರಿಸಿದ್ದ. ರಾಜಕಾರಣದಲ್ಲಿ ಈ ರೀತಿ ಇರುತ್ತವೆ ಎಂದರು.
ಸಚಿವ ಪುಟ್ಟರಂಗ ಶೆಟ್ಟಿ ವಿರುದ್ದ ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಾನು ರಾಜೀನಾಮೆ ನೀಡಲು ಹೇಳಿದ್ದೆ. ಆದರೆ ಆಡಳಿತ ಪಕ್ಷದವರು ಸಮರ್ಥನೆ ಮಾಡಿಕೊಳ್ಳುವುದು ವಾಡಿಕೆ ಎಂದು ಅವರು ಹೇಳಿದರು.
ಈ ಹಿಂದೆ ಲಾಡ್, ಜಾರ್ಜ್ ಅವರ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಿದ್ದರು. ಆ ಆಧಾರದ ಮೇಲೆ ಹೇಳಿದ್ದೆ. ತನಿಖೆಯಲ್ಲಿ ಆರೋಪ ಸಾಭೀತಾದರೆ ರಾಜೀನಾಮೆ ನೀಡಲಿ. ಶಾಮನೂರು-ಎಂಬಿಪಿ ನಡುವಿನ ವಾಕ್ಸಮರ ಒಳ್ಳೆಯದಲ್ಲ. ಶಾಮನೂರು ಹಿರಿಯರು ಎಂಬಿಪಿ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಅವರು ಹೇಳಿದರು.