ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮ ರಥೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು ದಕ್ಷಿಣ ಭಾರತದ ಮಧ್ಯ ಸುಬ್ರಹ್ಮಣ್ಯ ಎಂದೇ ಹೆಸರುವಾಸಿಯಾಗಿರುವ ಶ್ರೀ ಕ್ಷೇತ್ರವು ಸರ್ಪ ದೋಷ ಹಾಗೂ ಕುಜ ದೋಷ ನಿವಾರಣೆಗೆ ಹೆಸರುವಾಸಿಯಾಗಿದೆ ಪ್ರತಿವರ್ಷದಂತೆ ಈ ಬಾರಿಯೂ ಪುಷ್ಯ ಶುದ್ಧ ಷಷ್ಠಿಯಂದು ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಿತು ರಥೋತ್ಸವಕ್ಕೆ ಬೆಳಗ್ಗೆ 12 ಗಂಟೆಯ ಮೀನ ಲಗ್ನದಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕ ಟಿ ವೆಂಕಟರಮಣಯ್ಯ ಮತ್ತು ದೇವನಹಳ್ಳಿ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು.
ವಿಶೇಷ ಅಭಿಷೇಕ ಅಲಂಕಾರ:
ರಥೋತ್ಸವದ ಅಂಗವಾಗಿ ಸ್ವಾಮಿಗೆ ಬೆಳಗಿನ ಜಾವ 3 30ರಿಂದ ವಿಶೇಷ ಅಭಿಷೇಕ ರುದ್ರಾಭಿಷೇಕ ಕ್ಷೀರಾಭಿಷೇಕ ಗಂಧ ಅಭಿಷೇಕ ಕುಂಕುಮ ವಿಶೇಷ ಸುಗಂಧ ದ್ರವ್ಯ ಅಭಿಷೇಕ ನೆರವೇರಿದವು ಅಲ್ಲದೆ ಮುಂಜಾನೆ ಐದು ಮೂವತ್ತಕ್ಕೆ ಲಕ್ಷ್ಮೀ ನರಸಿಂಹಸ್ವಾಮಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯವರಿಗೆ ವಿಶೇಷ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು
ಕ್ಷೇತ್ರದ ಪೌರಾಣಿಕ ಹಿನ್ನೆಲೆ:
ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಸರ್ಪ ರೂಪದಲ್ಲಿರುವ ಸುಬ್ರಮಣ್ಯ ಸ್ವಾಮಿ ಮತ್ತು ಲಕ್ಷ್ಮಿ ನರಸಿಂಹ ಸ್ವಾಮಿ ಯವರ ಮೂರ್ತಿ ಏಕಶಿಲೆಯಲ್ಲಿರುವುದು ಅಪರೂಪ ದೃಶ್ಯ ತಾರಕಾಸುರನ ಸಂಹಾರಕ್ಕಾಗಿ ಸುಬ್ರಹ್ಮಣ್ಯ ಸ್ವಾಮಿಯು ಘೋರ ತಪಸ್ಸನ್ನು ಮಾಡಿ ಸರ್ಪ ರೂಪವನ್ನು ತಾಳಿದನು ತಾರಕಾಸುರ ನನ್ನು ಸಂಹರಿಸಿದ ನಂತರ ಈ ಭಾಗದಲ್ಲಿ ವಾಸವಾಗಿದ್ದ ಸರ್ಪ ರೂಪದ ಸುಬ್ರಹ್ಮಣ್ಯನಿಗೆ ಗರುಡ ಬಾದೆ ಆರಂಭವಾಯಿತು ಗರುಡನ ಭಾದೆಯನ್ನು ತಾಳಲಾರದೆ ಲಕ್ಷ್ಮೀ ನರಸಿಂಹ ಸ್ವಾಮಿಯ ಮೋರೆ ಹೋದ ಸ್ವಾಮಿಗೆ ಗರುಡನಿಂದ ತಪ್ಪಿಸುವ ಸಲುವಾಗಿ ಸುಬ್ರಮಣ್ಯನ ಬೆನ್ನ ಮೇಲೆ ಲಕ್ಷ್ಮಿ ನರಸಿಂಹ ಸ್ವಾಮಿ ನೆಲೆಸಿದನು ಆದ್ದರಿಂದ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿ ಮತ್ತು ಲಕ್ಷ್ಮೀ ನರಸಿಂಹ ಸ್ವಾಮಿಯ ಯನ್ನು ಒಂದೇ ಬಾರಿ ದರ್ಶನ ಮಾಡಬಹುದು.
ವಿಶೇಷ ಅಭಿಷೇಕ ಅಲಂಕಾರ:
ರಥೋತ್ಸವದ ಅಂಗವಾಗಿ ಸ್ವಾಮಿಗೆ ಬೆಳಗಿನ ಜಾವ 3 30ರಿಂದ ವಿಶೇಷ ಅಭಿಷೇಕ ರುದ್ರಾಭಿಷೇಕ ಕ್ಷೀರಾಭಿಷೇಕ ಗಂಧ ಅಭಿಷೇಕ ಕುಂಕುಮ ವಿಶೇಷ ಸುಗಂಧ ದ್ರವ್ಯ ಅಭಿಷೇಕ ನೆರವೇರಿದವು ಅಲ್ಲದೆ ಮುಂಜಾನೆ ಐದು ಮೂವತ್ತಕ್ಕೆ ಲಕ್ಷ್ಮೀ ನರಸಿಂಹಸ್ವಾಮಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯವರಿಗೆ ವಿಶೇಷ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು
ವಿವಿಧ ಸಂಘ-ಸಂಸ್ಥೆಗಳಿಂದ ಉಚಿತ ಅನ್ನ ಸಂತರ್ಪಣೆ
ಧರ್ಮಸ್ಥಳ ಮಂಜುನಾಥೇಶ್ವರ ಸೇವಾ ಟ್ರಸ್ಟ್ ಮತ್ತು ಸವಿತಾ ಸಮಾಜ ಭಗೀರಥ ಉಪ್ಪಾರ ಸಂಘ ಮಡಿವಾಳ ಮಾಚಿದೇವರ ಸಂಘ ಆರ್ಯವೈಶ್ಯ ಮಂಡಲಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತುಬೆಂಗಳೂರು ಹಾಲು ಒಕ್ಕೂಟ ದ ವತಿಯಿಂದ ಉಚಿತ ಹಾಲು ಮತ್ತು ಮಜ್ಜಿಗೆಯನ್ನು ದೇವಾಲಯದ ಆವರಣದಲ್ಲಿ ವಿತರಿಸಲಾಯಿತು ಹಾಗೂ ಹಲವು ಕಡೆ ತಾತ್ಕಾಲಿಕವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮತ್ತು ತಾತ್ಕಾಲಿಕ ಶೌಚಾಲಯ ಗಳನ್ನು ನಿರ್ಮಿಸಲಾಗಿತ್ತು
ಬೆಂಗಳೂರು ಹಾಲು ಒಕ್ಕೂಟ ದ ವತಿಯಿಂದ ಉಚಿತ ಹಾಲು ಮತ್ತು ಮಜ್ಜಿಗೆಯನ್ನು ದೇವಾಲಯದ ಆವರಣದಲ್ಲಿ ವಿತರಿಸಲಾಯಿತು ಹಾಗೂ ಹಲವು ಕಡೆ ತಾತ್ಕಾಲಿಕವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮತ್ತು ತಾತ್ಕಾಲಿಕ ಶೌಚಾಲಯ ಗಳನ್ನು ನಿರ್ಮಿಸಲಾಗಿತ್ತು
ಉಚಿತ ಬಸ್ ವ್ಯವಸ್ಥೆ.
ದೊಡ್ಡಬಳ್ಳಾಪುರ ನಗರದಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್ ಅಪ್ಪಯ್ಯಣ್ಣ ಮತ್ತು ಸಮಾಜ ಸೇವಕ ಟಿ. ರಾಮಣ್ಣ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುಮಾರು 30 ಬಸ್ ಗಳ ವ್ಯವಸ್ಥೆ ಕಲ್ಪಿಸಿದ್ದರು
ಭಕ್ತಾದಿಗಳಿಗೆ ವಿತರಿಸುವ ಪ್ರಸಾದಕ್ಕೆ ಪೊಲೀಸ್ ಭದ್ರತೆ:
ಜಿಲ್ಲಾ ಆಡಳಿತದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವಾಲಯದ ಪ್ರಸಾದ ನಿರ್ಮಿಸುವ ಪಾಕ ಶಾಲೆ ಬಳಿ ಸಿಸಿಟಿವಿ ಕ್ಯಾಮೆರಾ ಮತ್ತು ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿತ್ತು.
ಸಂಚಾರ ದಟ್ಟಣೆ ನಿವಾರಿಸಲು ಸೂಕ್ತ ಪೊಲೀಸ್ ಭದ್ರತೆ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ 4 ಡ್ರೋನ್ ಕ್ಯಾಮೆರಾ 3 ಡಿವೈಎಸ್ಪಿ 5 ಇನ್ಸ್ ಪೆಕ್ಟರ್ 13 ಸಬ್ ಇನ್ಸ್ಪೆಕ್ಟರ್ 25 ಎಎಸ್ ಐ ಹಾಗೂ ಮಹಿಳಾ ಸಿಬ್ಬಂದಿ ಸೇರಿದಂತೆ 300 ಕಾನ್ಸ್ಟೇಬಲ್ ಗಳನ್ನು ಬಾಂಬ್ ನಿಷ್ಕ್ರಿಯ ದಳ ಅಗ್ನಿಶಾಮಕ ವಾಹನ ವನ್ನು ನಿಯೋಜಿಸಲಾಗಿತ್ತು
ghati subramanya temple,brahma rathotsava