
ಬೆಂಗಳೂರು, ಜ.12-ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಕರ್ನಾಟಕ ಶಾಖೆ ವತಿಯಿಂದ ರಾಜ್ಯ ಮಟ್ಟದ ರೆಡ್‍ಕ್ರಾಸ್ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಯಿತು.
ನಗರದ ದೂರದರ್ಶನ ಸ್ಟುಡಿಯೋದಲ್ಲಿ ನಡೆಯಲಿರುವ 3ನೇ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ರೇಸ್‍ಕೋರ್ಸ್ ರಸ್ತೆಯಲ್ಲಿರುವ ರೆಡ್‍ಕ್ರಾಸ್ ಸೊಸೈಟಿ ಭವನದಲ್ಲಿ ದೆಹಲಿಯ ಐಆರ್‍ಸಿಎಸ್ ಪ್ರಧಾನ ಕಾರ್ಯದರ್ಶಿ ಆರ್.ಕೆ.ಜೈನ್ ಉದ್ಘಾಟಿಸಿದರು.
ಈ ಬಾರಿ ಕರ್ನಾಟಕ ರಾಜ್ಯದ 12 ವಿಶ್ವವಿದ್ಯಾನಿಲಯಗಳಿಂದ 37 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಗೆದ್ದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಈ ವೇಳೆ ಜೈನ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೊಸೈಟಿ ಅಧ್ಯಕ್ಷ ಬಸ್ರೂರ್ ರಾಜೀವ್‍ಶೆಟ್ಟಿ, ದೂರದರ್ಶನದ ಥಟ್ ಅಂತ ಹೇಳಿ ಖ್ಯಾತಿಯ ಕ್ವಿಜ್ ಮಾಸ್ಟರ್ ನಾ.ಸೋಮೇಶ್ವರ, ಸೊಸೈಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಚಂದ್ರಶೇಖರ್, ಸಂಚಾಲಕ ಶಾಕೂಬ್ ಮತ್ತಿತರರು ಪಾಲ್ಗೊಂಡಿದ್ದರು.